ಲಾಂಗು-ಮಚ್ಚು ತೋರಿಸಿ ದರೋಡೆ


11-04-2018 527

ಬೆಂಗಳೂರು: ನಗರದಲ್ಲಿ ದರೋಡೆಕೋರರು ಅಟ್ಟಹಾಸ ಮೆರೆದಿದ್ದಾರೆ. ಬೆಳಗಿನ ಜಾವ ಜನ ವಸತಿ ಪ್ರದೇಶದಲ್ಲೇ ಮಚ್ಚು-ಲಾಂಗ್ ತೋರಿಸಿ ಬೆದರಿಸಿ ಸುಲಿಗೆ ಮಾಡಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.

ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪೈ ಲೇಔಟ್ ನಲ್ಲಿ ಜ.4ರಂದು ನಡೆದಿರುವ ಸುಲಿಗೆ ಪ್ರಕರಣ ಇದಾಗಿದ್ದು, ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಳಗಿನ ಜಾವ 4.30 ರ ಸಮಯದಲ್ಲಿ ಕಲಸಕ್ಕೆಂದು ಬೈಕ್‍ನಲ್ಲಿ ಹೋಗುತ್ತಿದ್ದ ಯುವಕನನ್ನು ಬೈಕ್‍ನಲ್ಲಿ  ಬರುವ ಮೂವರು ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಲಾಂಗ್ ತೋರಿಸಿ ಬೆದರಿಸಿದ ದುಷ್ಕರ್ಮಿಗಳು ಬೈಕ್ ಸವಾರನಿನಂದ ದುಡ್ಡು, ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಅತ್ಯಂತ ಸ್ಪಷ್ಟವಾಗಿ ದಾಖಲಾಗಿವೆ. ಪೊಲೀಸರಿಗೆ ದೂರು ನೀಡದಂತೆ ಲಾಂಗ್ ಹಿಡಿದು ಬೆದರಿಸಿದ್ದರಿಂದ ಬೈಕ್ ಸವಾರ ದೂರು ನೀಡಿರಲಿಲ್ಲ. ಘಟನೆ ನಡೆದ ಸ್ಥಳದಲ್ಲಿರುವ ಮನೆ ಮಾಲೀಕರು ತಮ್ಮ ಸಿಸಿಟಿವಿ ಕ್ಯಾಮರಾದಲ್ಲಿ ಹಳೆಯ ದೃಶ್ಯಗಳ ಪರಿಶೀಲನೆ ನಡೆಸುವಾಗ ಪ್ರಕರಣ ಬೆಳಕಿಗೆ ಬಂದಿದೆ. ಸಿಸಿಟಿವಿ ದೃಶ್ಯಗಳನ್ನು ಪೊಲೀಸರಿಗೆ ನೀಡಿರುವ ಮನೆ ಮಾಲೀಕರು, ಕ್ರಮ ಗೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಈ ದೃಶ್ಯಗಳ ಆಧಾರದ ಮೇಲೆ ಮಹದೇವಪುರ ಪೊಲೀಸರು ದುಷ್ಕರ್ಮಿಗಳಿಗಾಗಿ ಬಲೆ ಬೀಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

weapons cctv ಅಟ್ಟಹಾಸ ದುಷ್ಕರ್ಮಿ