ಮತದಾರರಿಗೆ ಕಾಂಗ್ರೆಸ್ ಶಾಸಕ ರಾಜಣ್ಣ ಧಮಕಿ


11-04-2018 658

ಬೆಂಗಳೂರು: ಮಧುಗಿರಿ ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ ಮತದಾರರಿಗೆ ಧಮಕಿ ಹಾಕುವ ತಮ್ಮ ಚಾಳಿಯನ್ನು ಮುಂದುವರೆಸಿದ್ದಾರೆ. ಮಧುಗಿರಿ ಕೊಡಗೇನಹಳ್ಳಿ ಹೋಬಳಿಯ ನಾಯಕರ ಕಾಲೋನಿಯ ಪ್ರಚಾರ ಕಾರ್ಯಕ್ರಮದಲ್ಲಿ ಮತದಾರರಿಗೆ ರಾಜಣ್ಣ ಬಹಿರಂಗವಾಗಿ ಧಮಕಿ ಹಾಕಿದ್ದಾರೆ.

ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಮತಹಾಕಿದರೆ ನಿಮ್ಮ ಗ್ರಹಚಾರ ಸರಿಯಿರಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಇಲ್ಲಿ ಯಾವ ಪಕ್ಷದವರೂ ಅಭಿವೃದ್ಧಿ ಮಾಡಿಲ್ಲ. ನಾನೇ, ಅಭಿವೃದ್ಧಿ ಮಾಡಿದ್ದು. ಹಾಗಾಗಿ, ಕಾಂಗ್ರೆಸ್ ಗೆ ವೋಟ್ ಹಾಕಬೇಕು. ಬೇರೆ ಯಾವ ಪಕ್ಷದವರನ್ನೂ ಊರ ಒಳಗಡೆ ಸೇರಿಸ್ಕೋ ಬೇಡಿ. ಕಾಂಗ್ರೆಸ್ ಪಕ್ಷಕ್ಕೆ ವೋಟ್ ಹಾಕದೇ ಇದ್ದರೆ ನಿಮ್ಮ ಗ್ರಹಚಾರ ಕೆಟ್ತು ಅಂತಾನೇ ತಿಳ್ಕೊಳ್ಳಿ ಎಂದು ಧಮಕಿ ಹಾಕಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

K.N rajanna threaten ವೋಟ್ ಧಮಕಿ