ಎಂಎಲ್ಸಿ ಸ್ಥಾನಕ್ಕೆ ಭೈರತಿ ಸುರೇಶ್ ರಾಜೀನಾಮೆ


09-04-2018 521

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ನ ಸದಸ್ಯ ಭೈರತಿ ಸುರೇಶ್ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಅವರನ್ನು ಭೇಟಿಯಾದ ಸುರೇಶ್ ರಾಜೀನಾಮೆ ಸಲ್ಲಿಸಿದರು. ನಿನ್ನೆ ಸಂಜೆ ಸಭಾಪತಿ ಶಂಕರಮೂರ್ತಿ ಅವರಮನೆಗೆ ತೆರಳಿ ರಾಜೀನಾಮೆ ಸಲ್ಲಿಸಲಾಗಿದೆ. ಇನ್ನು  ಭೈರತಿ ಸುರೇಶ್ ಅವರಿಗೆ ಇನ್ನು ಮೂರು ತಿಂಗಳ ಸದಸ್ಯತ್ವ ಅವಧಿ ಇತ್ತು. ಬೆಂಗಳೂರಿನ ಹೆಬ್ಬಾಳ ವಿಧಾನ ಸಭೆ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಬಯಸಿರುವ ಹಿನ್ನೆಲೆಯಲ್ಲಿ ಅವರು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Byrathi suresh election ವಿಧಾನ ಪರಿಷತ್ ಸಭಾಪತಿ