ಚಿಕ್ಕಜಾಲ ಬಳಿ 3ಲಕ್ಷ ಹಣ ವಶಕ್ಕೆ


09-04-2018 515

ಬೆಂಗಳೂರು: ದಾಖಲೆಯಿಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 3 ಲಕ್ಷ ಹಣವನ್ನು ಚಿಕ್ಕಜಾಲ ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಚಿಕ್ಕಜಾಲ ಚೆಕ್‍ಪೋಸ್ಟ್ ಬಳಿ ನಿನ್ನ ರಾತ್ರಿ 7ರ ವೇಳೆ ಅನುಮಾನಾಸ್ಪದವಾಗಿ ಬಂದ ಮಾರುತಿ ಸ್ವಿಫ್ಟ್ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಬ್ಯಾಗೊಂದರಲ್ಲಿ 3ಲಕ್ಷ ಹಣವಿರುವುದು ಪತ್ತೆಯಾಗಿದೆ.

ಹಣವಿದ್ದ ಬ್ಯಾಗ್ ತೆಗೆದುಕೊಂಡು ನೋಡುವಷ್ಟರಲ್ಲಿ ಚಾಲಕ ಶ್ರೀನಿವಾಸಮೂರ್ತಿ ಹೆದರಿ ಕಾರು ಬಿಟ್ಟು ಓಡಿಹೋಗಿದ್ದು, ಕೆಲ ಸಮಯದ ನಂತರ ಮತ್ತೆ ಬಂದು ಹಣವನ್ನು ವ್ಯಾಪಾರಕ್ಕಾಗಿ ತೆಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾನೆ. ಹಣ ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ನೋಟಿಸ್ ನೀಡಿ ಕಳುಹಿಸಲಾಗಿದೆ ಎಂದು ಡಿಸಿಪಿ ಕಲಾ ಕೃಷ್ಣಸ್ವಾಮಿ ತಿಳಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

money seized ಚೆಕ್‍ಪೋಸ್ಟ್ ಬ್ಯಾಗ್