‘ಟಿಕೆಟ್ ವಂಚಿತರ ಅಸಮಾಧಾನ ಸಹಜ ಬೆಳವಣಿಗೆ’


09-04-2018 439

ಬೆಂಗಳೂರು: ಇದೇ ತಿಂಗಳ 19ರಂದು ತಾನು ಶಿಕಾರಿಪುರದಲ್ಲಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಜಿಜೆಪಿ ರಾಜ್ಯಾಧ್ಯಕ್ಷ ಬಿ.ಎ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ 72 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ, ಇನ್ನು ಮೂರ್ನಾಲ್ಕು ದಿನಗಳಲ್ಲಿ 50-60 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡ್ತೇವೆ. ಬಳಿಕ ಕೆಲವೇ ದಿನಗಳಲ್ಲಿ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಈ ಬಾರಿ 150ಕ್ಷೇತ್ರ ಗೆದ್ದೇಗೆಲ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಯಾರ ಜೊತೆಯೂ ಹೊಂದಾಣಿಕೆ ಇಲ್ಲ ಎಂದು ಹೇಳಿದ್ದಾರೆ. ಟಿಕೆಟ್ ವಂಚಿತರಿಗೆ ಅಸಮಾಧಾನ ಆಗಿರುವುದು ಸಹಜ ಬೆಳವಣಿಗೆ, ಟಿಕೆಟ್ ಕೈತಪ್ಪಿದವರಿಗೆ ನಮ್ಮ ಸರಕಾರ ಬಂದ ಬಳಿಕ ಬೇರೆ ಸವಲತ್ತುಗಳನ್ನು ಕೊಡುತ್ತೇವೆ ಎಂದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

B.S.Yeddyurappa election ಹೊಂದಾಣಿಕೆ ಬಿಡುಗಡೆ