ಪತ್ರಿಕಾಗೋಷ್ಠಿಯಲ್ಲೇ ವಿಷ ಕುಡಿದ ನಾಗ


06-04-2018 442

ಬೆಂಗಳೂರು: ಕಾಂಗ್ರೆಸ್ ಮುಖಂಡರಿಂದ ನನಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಮಾಜಿ ಕಾರ್ಪೋರೇಟರ್ ವಿ.ನಾಗರಾಜ್ ಪತ್ರಿಕಾಗೋಷ್ಠಿಯಲ್ಲೇ ವಿಷ ಕುಡಿದಿರುವ ಪ್ರಕರಣ ಪ್ರೆಸ್‍ಕ್ಲಬ್‍ನಲ್ಲಿ ನಡೆದಿದೆ. ವಿಷ ಕುಡಿದು ತೀವ್ರ ಅಸ್ವಸ್ಥರಾಗಿರುವ ವಿ.ನಾಗರಾಜ್ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇಂದು ಮಧ್ಯಾಹ್ನ ನಾಗರಾಜ್ ಅವರು ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು. ಈ ವೇಳೆ ನನಗೆ ಕಾಂಗ್ರೆಸ್ ಮುಖಂಡರಾದ ದಿನೇಶ್ ಗುಂಡೂರಾವ್ ಹಾಗೂ ಕೆ.ಜೆ.ಜಾರ್ಜ್ ಅವರಿಂದ ಮೋಸವಾಗಿದೆ ಎಂದು ಆರೋಪಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

bomb naga corporator ಅಸ್ವಸ್ಥ ಅನ್ಯಾಯ