'12ಕ್ಕೆ ಕರ್ನಾಟಕ ಬಂದ್'- ವಾಟಾಳ್


05-04-2018 475

ಬೆಂಗಳೂರು: ಕಾವೇರಿ ನಿರ್ವಹಣಾ ಮಂಡಳಿ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡು ಇಂದು ನೀಡಿರುವ ಬಂದ್ ಕರೆಗೆ ಪ್ರತಿಯಾಗಿ ಈ ತಿಂಗಳ 12ರಂದು ಕರ್ನಾಟಕ ಬಂದ್ ಮಾಡಲಾಗುವುದು ಎಂದು ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಆನೇಕಲ್ನಲ್ಲಿ ವಾಟಾಳ್ ನಾಗರಾಜ್ ಈ ವಿಷಯ ತಿಳಿಸಿದ್ದು, ತಮಿಳುನಾಡು ಸರ್ಕಾರ ಕ್ಯಾತೆ ತೆಗೆದಿದೆ. ತಮಿಳುನಾಡು ಸಿಎಂ ಬಂದು ಕರ್ನಾಟಕದ ಮುಖ್ಯಮಂತ್ರಿಗಳ ಜೊತೆಗೆ ಮಾತುಕತೆ ಮಾಡಬೇಕಿತ್ತು. ಆದರೆ ಅ ಕೆಲಸ ಮಾಡಿಲ್ಲ, ಏಕಾಏಕಿ ತಮಿಳುನಾಡು ಬಂದ್ ಮಾಡಿರುವುದು ಸರಿಯಲ್ಲ ಎಂದು ವಾಟಾಳ್ ಆಕ್ರೋಶ ವ್ಯಕ್ತಪಡಿಸಿದರು.

ಕಮಲ್ ಹಾಸನ್, ರಜನಿಕಾಂತ್ ಗೆ ಚುನಾವಣೆಯಲ್ಲಿ ಮತಬೇಕು. ಅದಕ್ಕೆ ಬಂದ್ಗೆ  ಬೆಂಬಲ ಸೂಚಿಸಿದ್ದಾರೆ. ಹಾಗಾಗಿ, ಅವರ ಚಲನಚಿತ್ರಗಳಿಗೆ ರಾಜ್ಯದಲ್ಲಿ ಸಂಪೂರ್ಣ ಬಂದ್ ಮಾಡಲಾಗುವುದು. ಯಾವುದೇ ಕಾರಣಕ್ಕೂ ಚಿತ್ರಗಳು ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ವಾಟಾಳ್ ನಾಗರಾಜ್ ಎಚ್ಚರಿಸಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

vatal nagaraj tamil nadu ಕಮಲ್ ಹಾಸನ್ ರಜನಿಕಾಂತ್