ಕೆರೆಗೆ ಜಿಗಿದು ಯುವಕ ಆತ್ಮಹತ್ಯೆ


05-04-2018 248

ಮೈಸೂರು: ಪ್ರೇಮ ವೈಫಲ್ಯದ ಹಿನ್ನೆಲೆ ಕೆರೆಗೆ ಜಿಗಿದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಜು (23) ಮೃತ ದುರ್ದೈವಿ. ಮೈಸೂರು ತಾಲ್ಲೂಕು ಇಲವಾಲ ಗ್ರಾಮದ ದೊಡ್ಡಕೆರೆಗೆ ಬಿದ್ದು ಮೃತಪಟ್ಟಿದ್ದಾನೆ. ಇಲವಾಲದ ಜನತಾ ಕಾಲೋನಿ ನಿವಾಸಿಯಾಗಿದ್ದ ಮಂಜು, ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದ. ಪ್ರೀತಿಸಿದ ಹುಡುಗಿ ಮದುವೆಗೆ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಚಪ್ಪಲಿ ಹಾಗೂ ಮೊಬೈಲ್ ಕೆರೆ ದಂಡೆಯ ಮೇಲೆ ಬಿಟ್ಟು ಕೆರೆಗೆ ಹಾರಿದ್ದಾನೆ. ಘಟನಾ ಸ್ಥಳಕ್ಕೆ ಇಲವಾಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

suicide love ಚಪ್ಪಲಿ ಇಲವಾಲ