ಮಕ್ಕಳೆದುರೇ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ


04-04-2018 710

ಬೆಂಗಳೂರು: ಗಂಡು ಮಗುವಾಗದಿರುವುದಕ್ಕೆ ಪತಿ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಪತ್ನಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಜಿಗಣಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಜಿಗಣಿಯ ವೀಣಾ (27) ಎಂದು ಗುರುತಿಸಲಾಗಿದೆ. ಈ ಸಂಬಂಧ ಪ್ರಕರಣ ಸಂಬಂಧ ಪೊಲೀಸರು ಆಕೆಯ ಪತಿ ಶಿವಕುಮಾರ್ ನನ್ನು ಬಂಧಿಸಿದ್ದಾರೆ.

ಹಳೆ ಕಾರುಳನ್ನು ಮಾರಾಟ ಮಾಡುತ್ತಿದ್ದ ಶಶಿಕುಮಾರ್ ಮತ್ತು ವೀಣಾ ಅವರ ವಿವಾಹವಾಗಿ 7 ವರ್ಷವಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕಳೆದ ಮಾರ್ಚ್ 28ರಂದು ರಾತ್ರಿ ದಂಪತಿ ನಡುವೆ ಗಂಡುಮಗುವಿಗೆ ಸಂಬಂಧಿಸಿದಂತೆ ಜಗಳವಾಯಿತು, ಇಬ್ಬರು ಹೆಣ್ಣು ಮಕ್ಕಳ ನಡುವೆ ವೀಣಾ ಕೆನ್ನೆಗೆ ಶಿವಕುಮಾರ್ ಹೊಡೆದಿದ್ದನು. ಶಿವಕುಮಾರ್ ಮನೆಯಿಂದ ಹೊರಹೋದ ನಂತರ ನೊಂದ  ವೀಣಾ ತಮ್ಮ ಇಬ್ಬರು ಹೆಣ್ಣು ಮಕ್ಕಳ ಎದುರೇ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.

ಕೂಡಲೇ ಇಬ್ಬರು ಹೆಣ್ಣು ಮಕ್ಕಳು ನೆರೆಹೊರೆಯವರನ್ನು ಸಹಾಯಕ್ಕೆ ಕರೆದಿದ್ದಾರೆ, ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಅಷ್ಟರಲ್ಲಾಗಲೇ ವೀಣಾ ಸಾವನ್ನಪ್ಪಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಆದರೆ ಶಶಿಕುಮಾರ್ ತನ್ನ ಮಗಳಿಗೆ ಬೆಂಕಿ ಹಚ್ಚಿ ಮನೆಯಿಂದ ಓಡಿಹೋಗಿದ್ದಾನೆ ಎಂದು ವೀಣಾ ಪೋಷಕರು ಆರೋಪಿಸಿದ್ದಾರೆ, ಇನ್ನೂ ಪೊಲೀಸರು ಪ್ರತ್ಯಕ್ಷ ಸಾಕ್ಷಿಗಳಾದ ಮಕ್ಕಳ ಹೇಳಿಕೆ ಪಡೆದುಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

suicide burnt alive ಜಗಳ ಸೀಮೆಎಣ್ಣೆ