ಲಾರಿ ಡಿಕ್ಕಿ: ಕೆಎಸ್ಆರ್ ಪಿ ಪೇದೆ ಸಾವು


04-04-2018 392

ಶಿವಮೊಗ್ಗ: ಲಾರಿ ಡಿಕ್ಕಿ ಹೊಡೆದು ಕೆಎಸ್ಆರ್ ಪಿ ಪೇದೆಯೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ರೊನಾಲ್ಡೋ ಡಿಸೋಜಾ(50) ಮೃತ ಪೇದೆ. ಶಿವಮೊಗ್ಗದ ಅಶೋಕ ವೃತ್ತದ ಬಳಿ ಡಿಸೋಜಾ ಅವರು ಕರ್ತವ್ಯಕ್ಕೆ ಬರುವಾಗ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದ್ದು, ಡಿಸೋಜಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿವಮೊಗ್ಗದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

KSRP constable ಪೇದೆ ಪಶ್ಚಿಮ