ಚುರುಕುಗೊಂಡ ಚುನಾವಣಾ ಭದ್ರತಾ ಕಾರ್ಯಗಳು


03-04-2018 408

ಮೈಸೂರು: ಜಿಲ್ಲೆಯಲ್ಲಿ ಚುನಾವಣಾ ಭದ್ರತಾ ಕಾರ್ಯಗಳು ಚುರುಕುಗೊಂಡಿವೆ. ಈ ಕುರಿತು ಜಿಲ್ಲಾ ಕಚೇರಿಯಲ್ಲಿ ಮೈಸೂರು ಡಿಸಿ ಶಿವಕುಮಾರ್ ಕೆ.ಬಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು,  ಉತ್ತಮ ರೀತಿಯ ಮತದಾನಕ್ಕೆ ಸಕಲ ಸಿದ್ಧತೆಗಳನ್ನು ಮಾಡುತ್ತಿದ್ದು, ಒಟ್ಟು ಜಿಲ್ಲೆಯಾದ್ಯಂತ ಗಡಿ ಭಾಗಗಳಲ್ಲಿ 49 ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ. 93 ಚುನಾವಣಾ ಸಂಚಾರಿ ತಪಾಸಣಾದಳಗಳನ್ನು ರಚನೆ ಮಾಡಲಾಗಿದೆ. ಜಿಲ್ಲೆಯಾದ್ಯಂತ 7 ಅಬಕಾರಿ ಚೆಕ್ ಪೋಸ್ಟ್ಗಳು, ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು 209 ವಲಯಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಇದುವರೆಗೂ ನೀತಿ ಸಂಹಿತೆ ಉಲ್ಲಂಘನೆಯಡಿ ನಾಲ್ಕು ಕೇಸ್ ದಾಖಲಾಗಿವೆ. ಕಳೆದ ತಿಂಗಳ 30ರಂದು ರಾಜು ಮನೆಗೆ ಅಮಿತ್ ಷಾ ಭೇಟಿ ನೀಡಿ 5 ಲಕ್ಷ ಪರಿಹಾರ ನೀಡಿರುವುದರ ಕುರಿತು, ಘಟನೆಗೆ ಸಂಬಂಧ ಪಟ್ಟ ಎಲ್ಲಾ ವರದಿಗಳು ಮೈಸೂರು ಜಿಲ್ಲಾಧಿಕಾರಿಗಳಿಂದ ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾಗಿದೆ, ಉಳಿದಂತೆ ಅನುಮತಿಯಿಲ್ಲದೆ ಹೆಚ್ಚಿನ ವಾಹನಗಳ ಬಳಕೆ, ಸರ್ಕಾರಿ ಕಾಮಗಾರಿಗೆ ಚಾಲನೆಗೆ ಸಂಬಂಧಪಟ್ಟಂತೆ ಇತರೆ ಕೇಸ್ ದಾಖಲಾಗಿವೆ ಎಂದು ತಿಳಿಸಿದ್ದಾರೆ. 

ಮಾದರಿ ನೀತಿ ಸಂಹಿತೆ ಉಲ್ಲಂಘನೆಯಡಿ 144 ದಾಳಿ ಪ್ರಕರಣಗಳಲ್ಲಿ, 29 ಮಂದಿಯನ್ನು ಬಂಧಿಸಲಾಗಿದೆ ಮತ್ತು ಅಗಾಧ ಮಧ್ಯ ವಶಪಡಿಸಿಕೊಳ್ಳಲಾಗಿದ್ದು, ಹೆಚ್.ಡಿ.ಕೋಟೆ ಚೆಕ್ ಪೋಸ್ಟ್ ನಲ್ಲಿ ಒಂದು ಕೆಜಿ ಚಿನ್ನಾಭರಣಗಳ ಜಪ್ತಿ ಮಾಡಲಾಗಿದೆ ಒಟ್ಟು 19 ಪ್ರಕರಣಗಳು ಈಗಾಗಲೇ ಇತ್ಯಾರ್ಥಪಡಿಸಲಾಗಿದೆ ಎಂದರು. ಯಾವುದೇ ರೀತಿಯ ಚುನಾವಣಾ ಬಗ್ಗೆ ಪರವಾನಗಿ ಪಡೆಯಲು ಪ್ರತಿ ತಾಲ್ಲೂಕಿನಲ್ಲೂ ಸಿಂಗಲ್ ವಿಂಡೋ ಕಚೇರಿ ತೆರೆಯಲಾಗಿದೆ. ಸೋಶಿಯಲ್ ಮೀಡಿಯಾಗಳ ಮೇಲೂ ಅಧಿಕಾರಿಗಳು ಕಣ್ಷಿಟ್ಟಿದ್ದಾರೆ. ಯಾವುದೇ ಮಾಧ್ಯಮಗಳಲ್ಲಿ ಜಾಹಿರಾತು ಕೊಡಲು ಸಂಬಂದಪಟ್ಟವರಿಂದ ಪರವಾನಗಿ ಪಡೆಯಲೇ ಬೇಕು, ಇದುವರೆಗೂ ಯಾವುದೇ ರೀತಿಯ ಚುನಾವಾಣ ಅತಿಕ್ರಮಗಳು ಸದ್ಯ ಕಂಡುಬಂದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ