ಮುಖಕ್ಕೆ ಪೆಪ್ಪರ್ ಸ್ಪ್ರೇ ಹಾಕಿ ಯುವಕನ ಮೇಲೆ ಹಲ್ಲೆ


27-03-2018 406

ಬೆಂಗಳೂರು: ಮಾಗಡಿ ರಸ್ತೆಯ ದಾಸರಹಳ್ಳಿ ಬಸ್ ನಿಲ್ದಾಣದ ಬಳಿ ನಿನ್ನೆ ರಾತ್ರಿ ಯುವತಿಯೊಬ್ಬಳನ್ನು ಪ್ರೀತಿಸುವ ವಿಚಾರಕ್ಕೆ ಗಲಾಟೆ ನಡೆದು ಯುವಕನಿಗೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ ಗೋವಿಂದರಾಜ ನಗರದ ಅಕ್ಬರ್ ಅಲಿ ಪುಣ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನ ಸ್ಥತಿ ಚಿಂತಾಜನಕವಾಗಿದೆ.

ದಾಸರಹಳ್ಳಿ ನಿಲ್ದಾಣದ ಬಳಿಯ ಎಸ್‍ಬಿಐ ಬ್ಯಾಂಕ್ ಮುಂದೆ  ರಾತ್ರಿ 10ರ ವೇಳೆ ಟೀ ಕುಡಿಯುತ್ತಿದ್ದ ಅಕ್ಬರ್ ಅಲಿಯನ್ನು ಕರೆದ ಗುಂಡ ಮತ್ತು ಆತನ ಸಹಚರರು ಮುಖಕ್ಕೆ ಪೆಪ್ಪರ್ ಸ್ಪ್ರೇ ಹಾಕಿ ಹಲ್ಲೆ ನಡೆಸಿ ಚಾಕುವಿನಿಂದ ಮನಬಂದಂತೆ ದೇಹದ ಎಲ್ಲ ಕಡೆ ಚುಚ್ಚಿ ಪರಾರಿಯಾಗಿದ್ದಾರೆ.

ಕಾರು ಚಾಲಕನಾಗಿದ್ದ ಅಕ್ಬರ್ ಅಲಿ ಇತ್ತೀಚೆಗೆ ಯುವತಿಯೊಬ್ಬಳನ್ನು ಪ್ರೀತಿಸುವ ವಿಚಾರವಾಗಿ ಮತ್ತು ಬೈಕ್ ವೀಲಿಂಗ್ ವಿಚಾರವಾಗಿ ಗುಂಡ ಎಂಬಾತನೊಂದಿಗೆ ಗಲಾಟೆ ಮಾಡಿಕೊಂಡಿದ್ದು ಅದೇ ದ್ವೇಷದಲ್ಲಿ ಗುಂಡ ಗುಂಪು ಕಟ್ಟಿಕೊಂಡು ಈ ಕೃತ್ಯವೆಸಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಅಕ್ಬರ್ ಅಲಿಯನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

car driver love ಯುವತಿ ಎಸ್‍ಬಿಐ