‘ಯಾರಿಗೂ ಕೌಂಟರ್ ಕೊಡುವ ‌ಅವಶ್ಯಕತೆ ನಮಗಿಲ್ಲ’


26-03-2018 590

ಹಾಸನ: ಏಪ್ರಿಲ್ 2ರಂದು ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ಜೆಡಿಎಸ್ ಸಮಾವೇಶ ಹಮ್ಮಿಕೊಂಡಿದ್ದು, ಮಾಜಿ ಪ್ರಧಾನಿ ದೇವೇಗೌಡ, ಪಿಜಿಆರ್ ಸಿಂದ್ಯ, ಬಿಎಸ್ ಪಿ ರಾಜ್ಯಾದ್ಯಕ್ಷರೂ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ ಎಂದು ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹಾಸನ ಜಿಲ್ಲೆಗೆ ಕಾಂಗ್ರೆಸ್ ಕೊಡುಗೆ ಏನೂ‌ ಎಂಬುದನ್ನು ವಿಸ್ತಾರವಾಗಿ ‌ತಮ್ಮ‌ಗಮನಕ್ಕೆ ತರುತ್ತೇವೆ. ಜೆಡಿಎಸ್ ಬಿಜೆಪಿಯ ‘ಬಿ’ ಟೀಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಗೆ ರಾಷ್ಟ್ರದಲ್ಲಿ ಬೆಲೆ ಇತ್ತು, ಆದರೆ ಅದೀಗ ರೋಡ್ ಗೆ ಬಂದು‌ ನಿಂತಿದೆ ಎಂದು ಲೇವಡಿ ಮಾಡಿದರು. ಕಾಂಗ್ರೆಸ್ ಪರಿಸ್ಥಿತಿ ನೋಡಿ ನನಗೆ‌ ವ್ಯಥೆ ಆಗುತ್ತಿದೆ ಎಂದರು.

ಸಮಾವೇಶ ಮಾಡುವ‌ ಮೂಲಕ ನಾವು ಯಾರಿಗೂ ಕೌಂಟರ್ ಕೊಡುವ ‌ಅವಶ್ಯಕತೆ ನಮಗಿಲ್ಲ. ರಾಹುಲ್ ಗಾಂಧಿಯಿಂದ ದೇವೇಗೌಡರು ಕಲಿಯುವ ಅವಶ್ಯಕತೆ ಇಲ್ಲ. ಯುಪಿಎ ಸರ್ಕಾರ ಇದ್ದಾಗ ಅಡ್ಜೆಸ್ಟ್ ಮಾಡಿಕೊಂಡು ಸರ್ಕಾರ ನಡೆಸಿದವರು ಯಾರು? ರಾಹುಲ್ ಗಾಂಧಿ ಬಳಿ ಹೇಳಿಸಿಕೊಳ್ಳುವ ಅವಶ್ಯಕತೆ ದೇವೇಗೌಡರಿಗಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ.

ಸಂಘ ಅಂದರೇನು ಪರಿವಾರ ಅಂದರೇನು ನಮಗೆ ಗೊತ್ತಿಲ್ಲ ಎಂದ ಅವರು, ಆ ಜಮೀರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರೆ ನಾನು ಪೊಳ್ಳಾಗಿಹೋಗುತ್ತೇನೆ, ನಾನು ಮತ್ತು ಸಹೋದರ ಕುಮಾರಸ್ವಾಮಿ ಜಗಳ ಆಡುತ್ತೀವಿ ಅಂದುಕೊಂಡಿದ್ದರೆ ಅದು ಸಾದ್ಯವಾಗಲ್ಲ. ದೇವರಾಜು ಅರಸು ದೇವೇಗೌಡರನ್ನು ಕಾಂಗ್ರೆಸ್ ಗೆ ಸೇರಿಸಲು ಪ್ರಯತ್ನಿಸಿದರು. ಆದರೆ ದೇವೇಗೌಡರಿಗೆ ನೈತಿಕತೆ ಇರುವುದರಿಂದ ಇನ್ನು ಉಳಿದುಕೊಂಡಿದ್ದಾರೆ. ಕಾಂಗ್ರೆಸ್ನಲ್ಲಿ ಮೂಲ‌ ಕಾಂಗ್ರೆಸ್ ನವರು‌ ಮೂಲೆ ಸೇರಿದ್ದಾರೆ ಎಂದು ದೂರಿದರು.

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

H. D. Revanna Kumaraswamy ನೈತಿಕತೆ ಸಮಾವೇಶ