ತೆಂಗು ಬೆಳೆಗಾರರ ಸಮಾವೇಶಕ್ಕೆ ಅಮಿತ್ ಷಾ


26-03-2018 515

ತುಮಕೂರು: ಜಿಲ್ಲೆಯ ಕಲ್ವೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಬಿಜೆಪಿ ಆಯೋಜಿಸಿರುವ ತೆಂಗು‌ ಬೆಳೆಗಾರರ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರೈತರನ್ನುದ್ದೇಶಿಸಿ ಮಾತನಾಡಲಿದ್ದಾರೆ. ತಿಪಟೂರು ಸೇರಿದಂತೆ ಸುತ್ತಮುತ್ತಲಿನ 10 ಸಾವಿರ ರೈತರು ಆಗಮಮಿಸುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ರೈತರ ಸಮಸ್ಯೆಗಳ ಕುರಿತು ಬಿ.ಸಿ.ನಾಗೇಶ್ ಅವರು ಸಲ್ಲಿಸಿರುವ ವರದಿ ಉಲ್ಲೇಖಿಸಿ ಮಾತನಾಡಲಿದ್ದಾರೆ ಎಂದು ತಿಳಿದು ಬಂದಿದೆ. ಮಾಜಿ ಶಾಸಕ ಬಿ.ಸಿ.ನಾಗೇಶ್, ತಾಲೂಕು ಬಿಜೆಪಿ ಅಧ್ಯಕ್ಷ ದಿವಾಕರ್, ನಗರಾಧ್ಯಕ್ಷ ಲೋಕೇಶ್, ಎಸ್ಸಿ ಮೋರ್ಚಾದ ಗಂಗರಾಜು ಇತರೆ ಮುಖಂಡರು ಅಮಿತ್ ಷಾರನ್ನು ಬರ ಮಾಡಿಕೊಳ್ಳಲಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

amit shah farmers ತೆಂಗು‌ ಬೆಳೆ ನಿರೀಕ್ಷೆ