ನಕಲಿ ಟಿಕೆಟ್: ಮಹಿಳಾ ಸಿಬ್ಬಂದಿ ವಜಾ


24-03-2018 468

ಮೈಸೂರು: ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಬಾರ್ ಕೋಡಿಂಗ್ ಇರುವ ಟಿಕೆಟ್ಗಳನ್ನೇ ನಕಲು ಮಾಡಿ ಸಿಕ್ಕಿಬಿದ್ದಿದ್ದಾರೆ. ಯುಸರ್ ಐಡಿ ಹಾಗೂ ಪಾಸ್ ವರ್ಡ್ ದುರ್ಬಳಕೆ ಮಾಡಿಕೊಂಡು ಟಿಕೆಟ್ ಕೌಂಟರ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿ ಅಕ್ರಮ ಎಸಗಿದ್ದಾರೆ. ನಕಲಿ ಟಿಕೆಟ್ ಸೃಷ್ಟಿಸುತ್ತಿದ್ದ ಮಹಿಳಾ ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಿ, ಮೃಗಾಲಯದ ನಿರ್ದೇಶಕ ರವಿಶಂಕರ್ ಆದೇಶಿಸಿದ್ದಾರೆ. ಕಳೆದ ಫೆಬ್ರವರಿ 8ರಂದು ನಕಲಿ ಟಿಕೆಟ್ಗಳು ಪತ್ತೆಯಾಗಿದ್ದವು. ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಂಡ ನಿರ್ದೇಶಕರು ಅಕ್ರಮ ಎಸಗಿದ ಸಿಬ್ಬಂದಿಯನ್ನು ವಜಾ ಮಾಡಿ, ಎಲ್ಲಾ ಟಿಕೆಟ್ ಕೌಂಟರ್ ಆಪರೇಟರ್ಗಳ ಸ್ಥಳ ಬದಲಾವಣೆ ಮಾಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Zoo password ಮೃಗಾಲಯ ಬದಲಾವಣೆ