ಅನಧಿಕೃತ ಮಧ್ಯ ಮಾರಾಟ ಮಾಡದಂತೆ ಪ್ರತಿಭಟನೆ


12-05-2017 544

ಕೊಪ್ಪಳ :-  ಪ್ರತಿಭಟನೆ ವೇಳೆ ಮಧ್ಯ ಮಾರಾಟದಿಂದ ಬೇಸತ್ತ ವ್ಯಕ್ತಿಯೋರ್ವನಿಂದ ಆತ್ಮಹತ್ಯಗೆ ಯತ್ನಿಸಿದ ಘಟನೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮದಲ್ಲಿ ನಡೆದಿದೆ. ಶೇಖರಯ್ಯ ಎಂಬುವವರು ವಿಷ ಕುಡಿದು ಆತ್ಮಹತ್ಯಗೆ ಯತ್ನಿಸಿದ  ವ್ಯಕ್ತಿ.  ಈ ವೇಳೆ ಪ್ರತಿಭಟನಾಕಾರರು ಶೇಖರಯ್ಯನನ್ನು ಕುಷ್ಟಗಿ ಆಸ್ಪತ್ರಗೆ ರವಾನೆ ಮಾಡಿದರು. ಬಂಡಿ ಗ್ರಾಮದಲ್ಲಿ ಕಿರಾಣಿ ಅಂಗಡಿ ಹಾಗೂ ಇನ್ನಿತರ ಜಾಗದಲ್ಲಿ ಅನಧಿಕೃತ ಮಧ್ಯ ಮಾರಾಟ ಮಾಡುತ್ತಿದ್ರು. ಇಂದು ಮುಂಜಾನೆಯಿಂದ ಗ್ರಾಮದ ಜನ ಮಧ್ಯ ಮಾರಾಟ ನಿಷೇಧ ಮಾಡುವಂತೆ ಗ್ರಾಮದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಯಲಬುರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

Links :ಒಂದು ಕಮೆಂಟನ್ನು ಬಿಡಿ