ಕಳಪೆ ಪ್ರದರ್ಶನ ನೀಡಿ ಅಭಿಮಾನಿಗಳಿಗೆ ಆಘಾತ ನೀಡಿದ ಆರ್ ಸಿ ಬಿ


11-05-2017 1117

ಇಂಡಿಯನ್ ಪ್ರಿಮಿಯರ್ ಲೀಗ್ ನ 10ನೇ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಭಿಮಾನಿಗಳ ಮನಸ್ಸಿಗೆ ಆಘಾತ ನೀಡಿದೆ ಎಂದು ಆರ್ಸಿಬಿ ಆಟಗಾರ ಶೇನ್ ವಾಟ್ಸನ್ ಬೇಸರ ವ್ಯಕ್ತಪಡಿಸಿದ್ದಾರೆ. 

ಪ್ರಸಕ್ತ ಸಾಲಿನ ಐಪಿಎಲ್ ಪಂದ್ಯಾವಳಿ ನನ್ನ ಪಾಲಿನ ಅತ್ಯಂತ ಕೆಟ್ಟ ಟೂರ್ನಿಯಾಗಿತ್ತು. ನಮ್ಮ ಕೆಟ್ಟ ಪ್ರದರ್ಶನದ ನಡುವೆಯೂ ಅಭಿಮಾನಿಗಳ ಬೆಂಬಲ ಸದ ನಮ್ಮನ್ನು ಉತ್ಸಾಹ ಚಿಲುಮೆಗಳಾಗಿ ಮಾಡುತ್ತಿತ್ತು. ಆದರೆ ಅವರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ನಾವು ಎಡೆವಿದ್ದೇವೆ ಎಂದಿದ್ದಾರೆ. 

ಆರ್ಸಿಬಿಗೆ ಎಷ್ಟು ನಿಷ್ಠಾವಂತ ಅಭಿಮಾನಿಗಳಿದ್ದಾರೆ ಎಂಬುದನ್ನು 2 ವರ್ಷಗಳಲ್ಲಿ ಅರ್ಥ ಮಾಡಿಕೊಂಡಿದ್ದು, ಕಳೆದ ವರ್ಷ ಆ ನಂಬಿಕೆಯನ್ನು ಉಳಿಸಿಕೊಂಡಿದದ್ದೆವು. ಆದರೆ ಈ ಬಾರಿ ಕೆಟ್ಟದಾಗಿ ಆಡುವ ಮೂಲಕ ಅಭಿಮಾನಿಗಳ ಮನಸ್ಸಿಗೆ ಆಘಾತ ತಂದಿದ್ದೇವೆ ಎಂದಿದ್ದಾರೆ.

Links :ಒಂದು ಕಮೆಂಟನ್ನು ಬಿಡಿ