ಭಾಷಣದ ವೇಳೆ ಶಾಸಕರತ್ತ ಕಲ್ಲೆಸೆತ..!


21-03-2018 613

ಬಾಗಲಕೋಟೆ: ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಮೇಲೆ ಕಲ್ಲೆಸೆದಿರುವ ಘಟನೆ ನಡೆದಿದೆ. ಜಿಲ್ಲೆಯ ಇಳಕಲ್ ತಾಲ್ಲೂಕಿನ ಕಂದಗಲ್ಲ ಗ್ರಾಮದಲ್ಲಿ ಶಾದಿ ಮಹಲ್ ಮತ್ತು  ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ, ನಂತರದಲ್ಲಿ ಗ್ರಾಮದ ಬಸ್ ನಿಲ್ದಾಣ ಹತ್ತಿರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಮಾಡುವಾಗ ಕಿಡಿಗೇಡಿಗಳು ವೇದಿಕೆಗೆ ಕಲ್ಲೆಸೆದಿದ್ದಾರೆ. ತುಸು ಅಂತರದಲ್ಲೇ ಪಾರಾಗಿರುವ ಶಾಸಕರಿಗೆ ಬೀಳುವ ಕಲ್ಲು ಕಾರ್ಯಕರ್ತರಿಗೆ ಬಿದ್ದು ಗಾಯಗೊಂಡಿದ್ದಾರೆ. ಕೃತ್ಯ ಎಸಗಿದವರಿಗಾಗಿ ಕಾಂಗ್ರೆಸ್ ಕಾರ್ಯಕರ್ತರು ಹುಡುಕಾಟ ನಡೆಸಿದ್ದಾರೆ.

ಆದರೆ ಇಷ್ಟಾದರೂ ಭಾಷಣ ಮುಂದುವರೆಸಿದ ಕಾಶಪ್ಪನವರ್ ನಾವು ಬ್ರಿಟಿಷರ ತುಪಾಕಿ ಗುಂಡಿಗೆ ಹೆದರಿಲ್ಲ, ಇನ್ನು ಕಿಡಿಗೇಡಿಗಳು ಎಸೆದ ಕಲ್ಲಿಗೆ ಹೆದರುತ್ತೇವೆಯೇ, ಕಲ್ಲೆಸೆದವರಿಗೆ ದೇವರು ಸರಿಯಾದ ಶಿಕ್ಷೆ ಕೊಡುತ್ತಾನೆ ಎಂದರು. ಸ್ಥಳಕ್ಕಾಗಮಿಸಿ ಇಳಕಲ್ ಗ್ರಾಮೀಣ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

kashappanavar Ilkal ಕಿಡಿಗೇಡಿ ಭೂಮಿಪೂಜೆ