ವಿಕಾಸ ಪರ್ವ ಯಾತ್ರೆಯ ಫ್ಲೆಕ್ಸ್, ಬ್ಯಾನರ್ ಧ್ವಂಸ..!


20-03-2018 543

ಚಿಕ್ಕಮಗಳೂರು: ನಗರದ ಜಿಲ್ಲಾ ಆಟದ ಮೈದಾನದಲ್ಲಿ ಇಂದು ಜೆಡಿಎಸ್ ನ ವಿಕಾಸ ಪರ್ವ ಕಾರ್ಯಕ್ರಮ ಆಯೋಜಿಸಿದ್ದು, ಕಾರ್ಯಕ್ರಮದ‌ ಬ್ಯಾನರ್ ಹಾಗು ಪ್ಲೆಕ್ಸ್ ಗಳನ್ನು ಧ್ವಂಸಗೊಳಿಸಲಾಗಿದೆ. ಶಾಸಕ‌ ಸಿ.ಟಿ.ರವಿ ಮನೆಯ ರಸ್ತೆಯಲ್ಲಿದ್ದ ಬ್ಯಾನರ್ ಗಳನ್ನು ಕಿತ್ತು ಹಾಕಿರುವ ಕಿಡಿಗೇಡಿಗಳು ಆತಂಕ ಸೃಷ್ಟಿಸಿದ್ದಾರೆ. 10ಕ್ಕೂ ಅಧಿಕ ಬ್ಯಾನರ್, ಫ್ಲೆಕ್ಸ್ ಗಳನ್ನ‌ ಬಿಜೆಪಿ ಕಾರ್ಯಕರ್ತರು ಕಿತ್ತುಹಾಕಿದ್ದಾರೆ ಎಂದು ಆರೋಪಿಸಿ, ಸಿ.ಟಿ‌ರವಿ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ.

ಚಿಕ್ಕಮಗಳೂರು ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಸಿ.ಟಿ.ರವಿ ಅವರ ಮನೆ ಇದ್ದು, ನಗರ ಸಭೆ ಅನುಮತಿ ಪಡೆದು ಬ್ಯಾನರ್, ಫ್ಲೆಕ್ಸ್ ಗಳನ್ನ‌‌ ಹಾಕಲಾಗಿತ್ತು. ಆದರೆ ಬಿಜೆಪಿ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರು ಆರೋಪಿಸಿದ್ದಾರೆ. ಸ್ಥಳಕ್ಕೆ ಬಸವನಹಳ್ಳಿ‌ ನಗರ ‌ಠಾಣೆ ಪೊಲೀಸರ‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

vikasa parva C.T.Ravi ಬ್ಯಾನರ್ ಫ್ಲೆಕ್ಸ್