ವಿದ್ಯುತ್ ತಂತಿ ತುಳಿದು ಬಾಲಕ ಸಾವು


19-03-2018 439

ಬೆಳಗಾವಿ: ಜಿಲ್ಲೆಯ ಅಥಣಿ ತಾಲ್ಲೂಕಿನ ತೆಲಸಂಗ ಗ್ರಾಮದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು 13ವರ್ಷದ ಬಾಲಕನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ. ಚಿದಾನಂದ ಕನ್ನೂರ ಮೃತ ಬಾಲಕ. ನಿನ್ನೆ ರಾತ್ರಿ ತೀವ್ರ ಗಾಳಿ ಮಳೆಗೆ ವಿದ್ಯುತ್ ತಂತಿ ಕತ್ತರಿಸಿ ರಸ್ತೆಗೆ ಬಿದ್ದಿತ್ತು. ಇದೇ ಮಾರ್ಗವಾಗಿ ನಡೆದುಕೊಂಡು ಬರುತ್ತಿದ್ದ ಬಾಲಕ ಚಿದಾನಂದ ವಿದ್ಯುತ್ ತಂತಿ ಮೇಲೆ ಕಾಲಿಟ್ಟಿದ್ದಾನೆ. ಈ ವೇಳೆ ವಿದ್ಯುತ್  ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

current shock electric wire ದಾರುಣ ವಿದ್ಯುತ್