ಪಂಚಾಯತ್ ಕಚೇರಿಯಲ್ಲಿ ಅಡುಗೆ ಮಾಡಿ ಪ್ರತಿಭಟನೆ


17-03-2018 465

ಕೊಪ್ಪಳ: ಗ್ರಾಮ ಪಂಚಾಯತ್ ನಿರ್ಲಕ್ಷ್ಯಕ್ಕೆ ಬೇಸತ್ತ ತಾಲ್ಲೂಕಿನ ಬುದುಗುಂಪಾ ಗ್ರಾಮಸ್ಥರು ಗ್ರಾಮಪಂಚಾಯತ್ ಕಚೇರಿಯಲ್ಲಿಯೇ ಅಡುಗೆ ಮಾಡಿಕೊಂಡು ಊಟ ಮಾಡಿದ ಗ್ರಾಮದ ಹತ್ತಾರು ಕುಟುಂಬಗಳು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಅಕಾಲಿಕ ಮಳೆ ಹಿನ್ನೆಲೆ, ಗ್ರಾಮದ ಮನೆಗಳಿಗೆ ಚರಂಡಿ ನೀರು ನುಗ್ಗಿದ್ದು ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಮಳೆ ಬಂದ ಪ್ರತಿಬಾರಿಯೂ ಮನೆಗಳಿಗೆ ಚರಂಡಿ ನೀರು ನಗ್ಗುತ್ತಿದ್ದು, ಈ ಕುರಿತು ಸಾಕಷ್ಟು ಬಾರಿ ದೂರು ನೀಡಿದ್ದರೂ, ಯಾವುದೇ ಪ್ರಯೋಜನವಾಗಲಿಲ್ಲ ಎಂದು ಆರೋಪಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Grama Panchayat koppal ಕಚೇರಿ ಆಕ್ರೋಶ