ತನಿಖೆ ನಿರ್ಲಕ್ಷ್ಯ ಪಿಎಸ್ಐ ಅಮಾನತು


17-03-2018 394

ಉತ್ತರ ಕನ್ನಡ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿದ ಪ್ರಕರಣ ಒಂದನ್ನು ಸರಿಯಾಗಿ ತನಿಖೆ ನಡೆಸದ ಹಿನ್ನೆಲೆ ಹಳಿಯಾಳ ಠಾಣೆ ಪಿಎಸ್ಐರನ್ನು ಅಮಾನತು ಮಾಡಲಾಗಿದೆ. ಜಿಲ್ಲೆಯ ಹಳಿಯಾಳ ಠಾಣೆಯ ಮಲ್ಲಪ್ಪ ಹೂಗಾರ್ ಅಮಾನತುಗೊಂಡ ಪಿಎಸ್ಐ. ಪಶ್ವಿಮ ವಲಯದ ಐಜಿಪಿ ಅಮಾರುಣ್ ಚರ್ಕವರ್ತಿ ಅವರು ಅಮಾನತು ಮಾಡಿ ಆದೇಶಿಸಿದ್ದಾರೆ. ಪ್ರಕರಣ ಸಂಬಂಧ ಆರೋಪಿ ಹಿಡಿದು ತನಿಖೆ ನಡೆಸುವಲ್ಲಿ ನಿರ್ಲಕ್ಷ್ಯ ಮಾಡಿದ್ದು, ಹಣ ಕಳೆದುಕೊಂಡವರು ಮೇಲಾಧಿಕಾರಿಗಳಿಗೆ ದೂರು ನೀಡಿದ್ದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

suspend PSI ಮೇಲಾಧಿಕಾರಿ ಅಮಾನತು