ರಾಯಚೂರು ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ..!


16-03-2018 536

ರಾಯಚೂರು: ರಾಯಚೂರು ಜಿಲ್ಲಾ ಬಿಜೆಪಿಯ ಭಿನ್ನಮತ ದೆಹಲಿ ತಲುಪಿದೆ. ಕ್ಷೇತ್ರದ ಡಾ.ಶಿವರಾಜ ಪಾಟೀಲ್ಗೆ ಟಿಕೆಟ್ ನೀಡದಂತೆ ರಾಯಚೂರು ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಮನವಿ ಮಾಡಿದ್ದಾರೆ. ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ಬಸವರಾಜ ಕಳಸ, ಇ.ಆಂಜನೇಯ, ತ್ರಿವಿಕ್ರಮ ಜೋಶಿ ನವದೆಹಲಿಯಲ್ಲಿ ಕೇಂದ್ರ ಸಚಿವ ಅನಂತ ಕುಮಾರ್ ಅವರನ್ನು ಭೇಟಿಯಾಗಿ ಈ ಕುರಿತು ಮನವಿ ಮಾಡಿದ್ದಾರೆ. ಜೆಡಿಎಸ್ಗೆ ರಾಜೀನಾಮೆ ನೀಡಿ ಡಾ.ಶಿವರಾಜ ಪಾಟೀಲ್ ಬಿಜೆಪಿ ಸೇರಿದ್ದಾರೆ. ವಲಸೆ ಬಂದಿರುವ ಡಾ.ಶಿವರಾಜ ಪಾಟೀಲ್ಗೆ ಬಿಜೆಪಿಯಿಂದ ಟಿಕೆಟ್ ನೀಡದಂತೆ ಕೇಳಿಕೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ