ಬೆದರಿಸಿ ಭೂ ದಾಖಲೆ, ಚಿನ್ನಾಭರಣ ಲೂಟಿ


16-03-2018 431

ಬೆಂಗಳೂರು: ನಗರದ ಅತ್ತಿಬೆಲೆಯಲ್ಲಿ ಮನೆಯೊಂದಕ್ಕೆ ಏಕಾಏಕಿ ನುಗ್ಗಿದ ದುಷ್ಕರ್ಮಿಗಳು ಬಂದೂಕಿನಿಂದ ಬೆದರಿಸಿ ಭೂ ದಾಖಲೆಗಳನ್ನು ದೋಚಿದ್ದಾರೆ. ಘಟನೆ ನಿನ್ನೆ ರಾತ್ರಿ ನಡೆದಿದ್ದು ತಡವಗಿ ಬೆಳಕಿಗೆ ಬಂದಿದೆ. ಸುಮಾರು 8 ರಿಂದ 10 ಮಂದಿ ದರೋಡೆಕೋರರ ಗ್ಯಾಂಗ್ ಈ ಕೃತ್ಯ ಎಸಗಿದೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ನಾಗರಾಜ್ ರೆಡ್ಡಿ ಎಂಬುವರ ಮನೆಗೆ ನುಗ್ಗಿ, ಮನೆಯಲ್ಲಿದ್ದವರನ್ನು ಕೂಡಿಹಾಕಿದ್ದಾರೆ. ನಂತರ ಮನೆಯಲ್ಲಿನ ಭೂ ದಾಖಲೆಗಳು ಮತ್ತು  2ಲಕ್ಷ ರೂ. ಮೌಲ್ಯದ ಚಿನ್ನಾಭರಣ ಲೂಟಿ ಮಾಡಿದ್ದಾರೆ. ದರೋಡೆಕೋರರು ತೆಲುಗು ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ಹೇಳಿರುವ ನಾಗರಾಜ್ ರೆಡ್ಡಿ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Gun Robbers ರಿಯಲ್ ಎಸ್ಟೇಟ್ ಭೂ ದಾಖಲೆ