ಆರ್.ಟಿ.ಐ ಕಾರ್ಯಕರ್ತನಿಗೆ ಜೀವ ಬೆದರಿಕೆ ಪತ್ರ


16-03-2018 704

ಬೆಳಗಾವಿ: ಆರ್.ಟಿ.ಐ ಕಾರ್ಯಕರ್ತ ಭೀಮಪ್ಪ ಗಡಾದ ಅವರಿಗೆ ಪ್ರತದ ಮೂಲಕ ಬೆದರಿಕೆ ಹಾಕಿರುವುದು ತಿಳಿದು ಬಂದಿದೆ. ಬೆಳಗಾವಿಯ ಗೋಕಾಕ ತಾಲ್ಲೂಕಿನ ಮೂಡಲಗಿ ನಿವಾಸಿ ಭೀಮಪ್ಪ ಗಡಾದ್ ಅವರು, ಈ ಹಿಂದೆ ಕನ್ನಡಧ್ವಜ ಹೋರಾಟ ಹಾಗೂ ಯಳ್ಳೂರಿನ ಬೋರ್ಡ್ ತೆರವುಗೊಳಿಸುವಂತೆ ಹೋರಾಡಿದ್ದರು. ಈ ವಿಚಾರಗಳನ್ನು ಪ್ರಸ್ತಾಪಿಸಿ ಕೊಲೆ ಮಾಡುವುದಾಗಿ, ಮರಾಠಾ ಯುವಕ ಮಂಡಳ ಸಂಘಟನೆಯಿಂದ ಬೆದರಿಕೆ ಪತ್ರ ಬಂದಿದೆ. ಇದೇ ತಿಂಗಳ 13ರಂದು ನಿಪ್ಪಾಣಿಯಿಂದ ಪತ್ರ ಪೋಸ್ಟ್ ಮಾಡಲಾಗಿದೆ. ಜೀವ ಬೆದರಿಕೆ ಪ್ರತದ ಕುರಿತು ಮೂಡಲಗಿ ಠಾಣೆಯಲ್ಲಿ ಭೀಮಪ್ಪ ಗಡಾದ್ ದೂರು ದಾಖಲಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Threaten letter ಆರ್.ಟಿ.ಐ  ಭೀಮಪ್ಪ ಗಡಾದ್