ಜೂಜಾಟ ನಿಷೇಧಿಸಿ ಎಸ್.ಪಿ ಆದೇಶ


15-03-2018 553

ತುಮಕೂರು: ಯುಗಾದಿ ಹಬ್ಬಕ್ಕೆ ಜೂಜಾಟ ನಿಷೇಧಿಸಿ ತುಮಕೂರಿನ ಎಸ್.ಪಿ ಡಾ.ದಿವ್ಯಾಗೋಪಿನಾಥ್ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಹಬ್ಬದ ದಿನ ಕಲ್ಯಾಣ ಮಂಟಪ, ಹೋಟೆಲ್, ವಸತಿ ಗೃಹಗಳು, ಮನೆ, ಟೆಂಟ್ ಸೇರಿದಂತೆ ರಸ್ತೆ ಬದಿ ಜೂಜಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಜೂಜಾಟಕ್ಕೆ ಮಾಲೀಕರು, ಮಧ್ಯವರ್ತಿಗಳು ಪ್ರೋತ್ಸಾಹಿಸಿದರೆ ಅವರ ಮೇಲೂ ಕ್ರಮ ತೆಗೆದುಕೊಳ್ಳುವುದಾಗಿಯೂ, ಗೂಂಡಾ ಕಾಯ್ದೆಯಡಿ ದೂರು ದಾಖಲಿಸಲಾಗುವುದು ಎಂದು ಎಸ್.ಪಿ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

gambling ban ವಸತಿ ಗೃಹ ಹೋಟೆಲ್