22ರಂದು ಮೆಟ್ರೋ ಸಿಬ್ಬಂದಿ ಮುಷ್ಕರ


14-03-2018 278

ಬೆಂಗಳೂರು: ಇದೇ ತಿಂಗಳ 22ರಂದು ಮೆಟ್ರೋ ರೈಲು ಸಿಬ್ಬಂದಿ ಮುಷ್ಕರದ ಹಿನ್ನೆಲೆ, ತರಾತುರಿಯಲ್ಲಿ ಪರ್ಯಾಯ ವ್ಯವಸ್ಥೆಗೆ ಬಿ.ಎಮ್.ಆರ್.ಸಿ.ಎಲ್ ಮುಂದಾಗಿದೆ. ತರಬೇತಿ ಪಡೆಯದ ಸಿಬ್ಬಂದಿಗಳನ್ನು ಆಪರೇಶನ್ ಕಂಟ್ರೋಲ್ಗೆ ವರ್ಗಾವಣೆ ಮಾಡಿದೆ. ಅಪರೇಶನ್ ಕಂಟ್ರೋಲ್ ಸೆಂಟರ್ ಮೆಟ್ರೋ ಸಂಚಾರದಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಅಪರೇಶನ್ ಕಂಟ್ರೋಲ್ನಲ್ಲಿ ಕೆಲಸ ಮಾಡಲು ಕನಿಷ್ಠ ಎರಡು ತಿಂಗಳ ತರಬೇತಿ ಪಡೆದಿರಬೇಕು, ಆದರೆ ಸ್ಟೇಷನ್ ಕಂಟ್ರೋಲ್ ಸಿಬ್ಬಂದಿಗಳನ್ನು ಅಪರೇಶನ್ ಕಂಟ್ರೋಲ್ ಸೆಂಟರ್ಗೆ ವರ್ಗಾವಣೆ ಮಾಡಿದೆ ಎನ್ನಲಾಗಿದೆ. ಅದರೆ, ತರಬೇತಿ ಪಡೆಯದ ಸಿಬ್ಬಂದಿಗಳಿಂದ ಅನಾಹುತಗಳಾದರೆ ಯಾರು ಹೊಣೆ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

metro strike ತರಬೇತಿ ಸಿಬ್ಬಂದಿ