‘ಯಾರಿಂದ ಬೆಂಗಳೂರನ್ನ ರಕ್ಷಿಸಬೇಕು'


14-03-2018 547

ಬೆಂಗಳೂರು: ನಗರದ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಗೆಳೆಯರ ಬಳಗ ವೃತ್ತದಲ್ಲಿ ಜೆಡಿಎಸ್ನ ವಿಕಾಸಪರ್ವ ಪಾದಯಾತ್ರೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಬಿಜೆಪಿ, ಕಾಂಗ್ರೆಸ್ ಪರಸ್ಪರ ಚಾರ್ಜ್ ಶೀಟ್ ಬಿಡುಗಡೆ ಮಾಡಿದರು, ಆದರೆ ಕುಮಾರಸ್ವಾಮಿ 20 ತಿಂಗಳ ಆಡಳಿತದ ಬಗ್ಗೆ ಚಾರ್ಜ್ ಶೀಟ್ ಬಿಡುಗಡೆ ಮಾಡಲು ಸಾಧ್ಯವಿಲ್ಲ ಅಂತಹ ಉತ್ತಮ ಆಡಳಿತ ನೀಡಿದ್ದಾರೆ. ಈಗ ಮತ್ತೇ ಉತ್ತಮ ಆಡಳಿತ ನೀಡಬೇಕಾದರೆ ಬಹುಮತದ ಸರ್ಕಾರ ಬೇಕು ಎಂದರು.

ಬಿಬಿಎಂಪಿಯಲ್ಲಿ ನೈಸ್ ಬಗ್ಗೆ ಪದ್ಮನಾಭ ರೆಡ್ಡಿ ಮಾತನಾಡುತ್ತಾರೆ, ಅಂದು ಕುಮಾರಸ್ವಾಮಿ ಕ್ಯಾಬಿನೆಟ್ ನಲ್ಲಿ ಈ ವಿಚಾರ ತಂದಾಗ ಬಿಜೆಪಿ ಬೆಂಬಲ ಕೊಟ್ಟಿಲ್ಲ, ಇಲ್ಲದಿದ್ದರೆ ಅಂದೇ ಮಹಾವಂಚಕರಿಂದ ಭೂಮಿಯನ್ನು ವಾಪಸ್ ಪಡೆಯಬಹುದಿತ್ತು, ನೈಸ್ ಯೋಜನೆಯನ್ನೇ ಸರ್ಕಾರದ ಸುಪರ್ದಿಗೆ ಪಡೆಯಲು ಕುಮಾರಸ್ವಾಮಿ ಮುಂದಾಗಿದ್ದರು, ಇದ್ಯಾವುದಕ್ಕೂ ಬಿಜೆಪಿ ಬೆಂಬಲ ಕೊಟ್ಟಿಲ್ಲ ಎಂದು ದೂರಿದರು.

ಕಾವೇರಿ ವಿಚಾರದಲ್ಲಿ 2007ರಲ್ಲಿ ನಮಗೆ ವ್ಯತಿರಿಕ್ತ ತೀರ್ಪು ಬಂದಾಗ ಹೋರಾಟ ಮಾಡಿದ್ದೆ, ಈಗ ತೀರ್ಪು ಬಂದಾಗ ಸಿಎಂ ಸೇರಿದಂತೆ ಸಚಿವರುಗಳು ಸಿಹಿ ಹಂಚಿಕೊಂಡರು. ಇದು ಯಾರಿಂದ ಬಂತು ಹೇಗೆ ಬಂತು ಅಂತಾ ಹೇಳಲ್ಲ, 2011ರ 89 ಲಕ್ಷ ಜನಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರು ಕೊಟ್ಟಿದ್ದಾರೆ, ಈಗ ಬೆಂಗಳೂರಿನಲ್ಲಿ 1 ಕೋಟಿ 20.ಲಕ್ಷ ಜನಸಂಖ್ಯೆ ದಾಟಿದೆ ಇದನ್ನ ಜನ ಅರ್ಥ ಮಾಡಿಕೊಳ್ಳಬೇಕು, ಈಗ ಕುಡಿಯಲು ಕೊಟ್ಟಿರುವ ನೀರು ಎಲ್ಲರಿಗೂ ಸಾಲದು ಎಂದು ತಿಳಿಸಿದ್ದಾರೆ.

ಬೆಂಗಳೂರನ್ನ ರಕ್ಷಿಸಿ, ಯಾರಿಂದ ಬೆಂಗಳೂರನ್ನ ರಕ್ಷಿಸಬೇಕು, ಯಾರ್ಯಾರ ಬಳಿ ಆಸ್ತಿ ಉಂಟೋ ಅದನ್ನ ಕಿತ್ಕೋಬೇಕಾ, ಯಾರಬಳಿ ಎಷ್ಟು ಆಸ್ತಿ ಎನ್ನುವುದು ನನಗೆ ಗೊತ್ತು ಅದನ್ನು ಕಿತ್ಕೋಬೇಕು ಅಂದರೆ ಅದಕ್ಕೆ ಬಿಲ್ ತರಬೇಕು, ಅಂತಹ ಬಿಲ್ ತರಲು ಜೆಡಿಎಸ್ ಗೆ ಅಧಿಕಾರ ಕೊಡಿ ಎಂದು ಮನವಿಸಿಕೊಂಡಿದ್ದಾರೆ.

ಹ್ಯಾರೀಸ್ ಮಗ ನಲಪಾಡ್ ಹಲ್ಲೆ ಮಾಡಿದ ರೀತಿಯಲ್ಲೇ ಮಾಗಡಿಯಲ್ಲಿ ಜೆಡಿಎಸ್ ನ ಪುರಸಭಾ ಸದಸ್ಯನ ಮೇಲೆ ಹಲ್ಲೆ ಮಾಡಿದ್ದಾರೆ. ಇದೆಲ್ಲ ನೋಡಿದರೆ ನಮ್ಮ ರಾಜ್ಯದ ಕಾನೂನು ಸುವ್ಯವಸ್ಥೆ ಹೇಗಿದೆ ಎಂಬುದು ಗೊತ್ತಾಗುತ್ತದೆ ಎಂದು ರಾಜ್ಯ ಸರ್ಕಾರದ ವ್ಯಫಲ್ಯತೆ ಬಗ್ಗೆ ಮಾಜಿ ಪ್ರಧಾನಿ ಬೇಸರ ವ್ಯಕ್ತಪಡಿಸಿದರು.

 

 


ಒಂದು ಕಮೆಂಟನ್ನು ಬಿಡಿ