ಒಂದೇ ತಿಂಗಳಲ್ಲಿ 3 ಜೀವಂತ ಹೃದಯಗಳ ರವಾನೆ


13-03-2018 533

ಬೆಂಗಳೂರು: ಒಂದೇ ತಿಂಗಳಿಗೆ 3 ಜೀವಂತ ಹೃದಯಗಳ ರವಾನೆಗೆ ಸಿಲಿಕಾನ್‍ಸಿಟಿ ಬೆಂಗಳೂರು ಸಾಕ್ಷಿಯಾಗಿದೆ. ಇಂದೂ ಕೂಡ ನಗರದಲ್ಲಿ 2 ಜೀವಂತ ಹೃದಯಗಳು ರವಾನೆಯಗಿದ್ದು, ಜೀವಂತ ಹೃದಯದ ರವಾನೆ ವೇಳೆ ಗ್ರೀನ್ ಕಾರಿಡಾರ್(ಶೂನ್ಯ ಸಂಚಾರ) ವ್ಯವಸ್ಥೆಯನ್ನು ಮಾಡಿಕೊಡಲಾಗಿತ್ತು. ಒಂದು ನಾರಾಯಣ ಇನ್ಸಿಟ್ಯೂಟ್ ಗೆ ತಲುಪಿದರೆ, ಒಂದು ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ಹಾಗೂ ಮತ್ತೊಂದು ಯಶವಂತಪುರದಲ್ಲಿರೋ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಿಂದ ನಾರಾಯಣ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ 6 ವರ್ಷದ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಳು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೆದುಳು ನಿಷ್ಕ್ರಿಯವಾಗಿ ಸಾವನ್ನಪ್ಪಿದ್ದಳು. ಆ ಹೃದಯವನ್ನು ಮಾರ್ಚ್ 8ರಂದು ಎಂಎಸ್ ಆಸ್ಪತ್ರೆಯಲ್ಲಿರುವ ನಾರಾಯಣ ಹಾರ್ಟ್ ಸೆಂಟರ್ಗೆ ರವಾನೆ ಮಾಡಲಾಗಿತ್ತು. ಒಂದೇ ತಿಂಗಳಲ್ಲಿ ಮೂರು ಜೀವಂತ ಹೃದಯ ರವಾನೆಗೆ ಬೆಂಗಳೂರು ಸಾಕ್ಷಿಯಾಗಿದೆ.


ಒಂದು ಕಮೆಂಟನ್ನು ಬಿಡಿ