ಅನಂತ ಕುಮಾರ್ ಹೆಗಡೆ ಗೋ ಬ್ಯಾಕ್..!


13-03-2018 594

ಬೆಳಗಾವಿ: ತಾಲ್ಲೂಕಿನ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಭಾಗವಹಿಸುವುದನ್ನು ವಿರೋಧಿಸಿ ಚಿಕ್ಕೋಡಿಯ ವಿವಿಧ ದಲಿತ ಸಂಘಟನೆಗಳು ಪ್ರತಿಭಟಿಸಿದ್ದಾರೆ. ದಲಿತ ವಿರೋಧಿ ಹೇಳಿಕೆಗೆ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು, ಗೋ ಬ್ಯಾಕ್, ಗೋ ಬ್ಯಾಕ್ ಅಂತಾ ಸಚಿವ ಹೆಗಡೆ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಸಂವಿಧಾನ ಬದಲಾಯಿಸಲೆಂದೇ ನಾವು ಬಂದಿದ್ದು ಹಾಗೂ ಬೀದಿಯಲ್ಲಿ ಬೊಗಳುವ ನಾಯಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂಬ ಹೇಳಿಕೆ ನೀಡಿದ್ದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Ananth kumar hegde Constitution ಗೋ ಬ್ಯಾಕ್ ವಿರೋಧಿ