ಬೆಳ್ಳಂಬೆಳಿಗ್ಗೆ ಅಧಿಕಾರಿಗಳಿಗೆ ಎಸಿಬಿ ಶಾಕ್


09-03-2018 469

ಬೆಳಗಾವಿ: ಅಥಣಿಯ ಕೃಷ್ಣಾ ಮೇಲ್ದಂಡೆ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿ ರಾಜಶ್ರೀ ಜೈನಾಪುರೆ ಮನೆ, ಸೇರಿದಂತೆ ಅವರ ಅಣ್ಣನ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಳಗಾವಿಯ ಕುವೆಂಪು ನಗರದಲ್ಲಿನ ಮನೆ, ವಿಜಯಪುರದಲ್ಲಿರುವ ಮನೆ, ಧಾರವಾಡದಲ್ಲಿರುವ ಗಂಡನ ಮನೆ, ಸಂಬಂಧಿಕರ ಮನೆ ಸೇರಿ ಆರು‌ ಕಡೆ ಏಕಕಾಲದಲ್ಲಿ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿಯಲ್ಲಿ ಡಿಎಸ್.ಪಿ ಜೆ ರಘು ನೇತೃತ್ವದಲ್ಲಿ ಆರು ಮಂದಿ ಅಧಿಕಾರಿಗಳೊಂದಿಗೆ ವಿವಿಧೆಡೆ ದಾಳಿ ಮಾಡಿದ್ದಾರೆ. ರಾಜಶ್ರೀ ಜೈನಾಪುರೆ ಅವರು ಈ ಹಿಂದೆ ಬೆಳಗಾವಿಯ ಉಪ ವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.


ಒಂದು ಕಮೆಂಟನ್ನು ಬಿಡಿ