ಮಗಳ ಮದುವೆ ಸೆಲ್ಫಿ ವಿಡಿಯೋದಲ್ಲಿ ಖಚಿತ


08-03-2018 622

ಬೆಂಗಳೂರು: ನಿನ್ನೆ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ದಾವಣಗೆರೆಯ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಮೂರ್ತಿ ನಾಯ್ಕ ಅವರ ಪುತ್ರಿ ಲಕ್ಷ್ಮೀನಾಯ್ಕ್ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಾಸ್ತಿಗುಡಿ ಚಿತ್ರ ನಿರ್ಮಾಪಕ ಸುಂದರ್ ಗೌಡ ಜೊತೆ ವಿವಾಹವಾಗಿದ್ದಾರೆ. ಮಾಸ್ತಿಗುಡಿ ನಿರ್ಮಾಪಕ ಸುಂದರ್ ಗೌಡ ಜೊತೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಬೆಳಿಗ್ಗೆ ವಿವಾಹವಾದ ನಂತರ ಶಿವಮೂರ್ತಿ ನಾಯ್ಕ ಅವರ ಪುತ್ರಿ ವೈದ್ಯಕೀಯ ವಿದ್ಯಾರ್ಥಿನಿ ಲಕ್ಷ್ಮೀ ನಾಯ್ಕ್ ಜೊತೆಯಾಗಿ ಮಾತನಾಡಿರುವ ಸೆಲ್ಫಿ ವಿಡಿಯೋದಲ್ಲಿ ವಿವಾಹವಾಗಿರುವುದನ್ನು ಖಚಿತಪಡಿಸಿ ಸ್ಪಷ್ಟನೆ ನೀಡಿದ್ದಾರೆ.

ತಾನು ನಿರ್ಮಾಪಕ ಸುಂದರ್ ಗೌಡ ಪತ್ನಿ ಲಕ್ಷ್ಮೀನಾಯ್ಕ್,`ನಾನು ಸುಂದರ್ ಗೌಡ್ರು ಇಬ್ಬರು ಇಷ್ಟ ಪಟ್ಟು ಮದುವೆಯಾಗಿದ್ದೇವೆ ನಮ್ಮಿಂದ ಯಾರಿಗೂ ಏನೋ ತೊಂದರೆ ಆಗಬಾರದು, ಹಾನಿಯಾಗಬಾರದು. ನಾನು ಇಷ್ಟ ಪಟ್ಟು ಮನಸಾರೆ ಮದುವೆಯಾಗಿದ್ದೀನಿ. ಇದಕ್ಕೆ ನನಗೆ ಯಾವುದೇ ಅಭ್ಯಂತರವಿಲ್ಲ. ಯಾರೂ ಫೋರ್ಸ್ ಮಾಡಿಲ್ಲ. ನಾನು ನನ್ನ ಸ್ವಂತ ನಿರ್ಧಾರದಿದಲೇ ಮದುವೆಯಾಗಿದ್ದೇನೆ. ನಾನು ಮೈನರ್ ಕೂಡ ಅಲ್ಲಾ ನಾನು ಮೇಜರ್. ನನಗೆ ಯೋಚನೆ ಮಾಡುವ ಬುದ್ಧಿ ಇದೆ. ನಾನು ಖುಷಿಯಿಂದ ಮದುವೆಯಾಗಿದ್ದೀನಿ. ಇವರ ಜೊತೆ ಸಂತಸದಿಂದ ಜೀವನ ಮಾಡುತ್ತೇನೆ'' ಎಂದು ನವ ವಧು-ವರರರು ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ನೀಡಿದ್ದಾರೆ. ನಾಪತ್ತೆ ಪ್ರಕರಣ ದಾಖಲಾದ ಮೇಲೆ ಸುಂದರ್ ಗೌಡ ಕುಟುಂದವರು ಫೋನ್ ಟ್ರಾಪ್ ಮಾಡಿ ಹುಡುಕಾಟ ಮಾಡುತ್ತಿದ್ದರು. ಇದಕ್ಕೆಲ್ಲಾ ಸ್ಪಷ್ಟನೆ ಕೊಡಬೇಕಾಗಿತ್ತು. ಆದ್ದರಿಂದ ಲಕ್ಷ್ಮಿ ನಾಯ್ಕ್ ಅವರು ವಿಡಿಯೋ ಮಾಡಿ ಸಂದೇಶ ನೀಡಿದ್ದಾರೆ.

ಮಾಸ್ತಿಗುಡಿ ನಿರ್ಮಾಪಕ ಸುಂದರ್ ಹಾಗೂ ಶಾಸಕರ ಪುತ್ರಿ ಕಳೆದ ಆರು ತಿಂಗಳಿನಿಂದ ಪ್ರೀತಿ ಮಾಡುತ್ತಿದ್ದರು. ಶಾಸಕರ ಯಲಹಂಕ ಉಪನಗರದ ಬಿ ಹಂತದ ಮನೆಯಿಂದ ಲಕ್ಷ್ಮಿಗೌಡ ನಾಪತ್ತೆಯಾಗಿದ್ದರು ,ಈ ಬಗ್ಗೆ ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರ ಎರಡು ವಿಶೇಷ ತಂಡಗಳಿಂದ ಶಾಸಕರ ಪುತ್ರಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು.

ಇನ್ನೂ  ರಾಜರಾಜೇಶ್ವರಿ ಕಾಲೇಜಿನದಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದ 24 ವರ್ಷದ ಶಾಸಕರ ಲಕ್ಷ್ಮೀ ನಾಯ್ಕ ನಿನ್ನೆ ಮಧ್ಯಾಹ್ನ ಮನೆಯಿಂದ ಹೊರ ಹೋದರವರು ರಾತ್ರಿಯಾದರೂ ವಾಪಸ್ ಬಾರದೇ ಮೊಬೆಲ್ ಸ್ವಿಚ್ ಆಫ್ ಮಾಡಿದ್ದರಿಂದ ಆತಂಕಗೊಂಡು ಸ್ನೇಹಿತರು ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಾಟ ನಡೆಸಿ ನಂತರ ಯಲಹಂಕದ ಉಪನಗರದ ಪೊಲೀಸರಿಗೆ ದೂರು ನೀಡಲಾಗಿತ್ತು. ಶಾಸಕ ಶಿವಮೂರ್ತಿ ನಾಯ್ಕ ಅವರ ಪತ್ನಿ ಡಾ.ಗೀತಾನಾಯ್ಕ ಅವರು ಪುತ್ರಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿ ನಾಪತ್ತೆಯಾಗಿರುವ ಮಗಳನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದು ಲಿಖಿತವಾಗಿ ಯಾರ ಮೇಲೂ ಅನುಮಾನ ವ್ಯಕ್ತಪಡಿಸಿರಲಿಲ್ಲ.

ಆದರೆ ಮೌಖಿಕವಾಗಿ ಪುತ್ರಿಯು ಮಾಸ್ತಿಗುಡಿ ಚಿತ್ರ ನಿರ್ಮಾಪಕ ಸುಂದರ್ ಗೌಡ ಅವರನ್ನು ಪ್ರೀತಿಸುತ್ತಿದ್ದು ಆತನ ಜೊತೆ ವಿವಾಹ ಮಾಡುವಂತೆ ಪಟ್ಟು ಹಿಡಿದಿದ್ದಳು ಸುಂದರ್ ಗೌಡ ಪುತ್ರಿಗಿಂತ 13 ವರ್ಷ ವಯಸ್ಸಿನಲ್ಲಿ ದೊಡ್ಡವನಾಗಿದ್ದು ಆತನಿಗೆ 37 ವರ್ಷ ವಯಸ್ಸಾಗಿದೆ. ಮಾಸ್ತಿಗುಡಿ ಚಿತ್ರದಿಂದ ಸಾಕಷ್ಟು ನಷ್ಟ ಅನುಭವಿಸಿ ಪೊಲೀಸ್ ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. ಇದರಿಂದಾಗಿ ಆತನ ಜೊತೆ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದೇವೆ ಎಂದು ತಿಳಿಸಿದ್ದರು. ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಸುಂದರ್ ಗೌಡ  ಜೊತೆ ಪುತ್ರಿ ಹೋಗಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸಿದ್ದರು, ಇದಲ್ಲದೇ ಶಾಸಕರ ಪುತ್ರಿಯು ಮಾಸ್ತಿಗುಡಿ ಚಿತ್ರ ನಿರ್ಮಿಸಿದ್ದ ಸುಂದರ್ ಗೌಡರನ್ನು ಪ್ರೀತಿಸುತ್ತಿದ್ದು ಅವರ ಮದುವೆಯಾಗಲು ಹೋಗುತ್ತಿದ್ದೇನೆ ಸ್ನೇಹಿತರ ಬಳಿ ಹೇಳಿಕೊಂಡಿದ್ದರು.

ನಾಪತ್ತೆಯಾಗಿರುವ ಶಾಸಕರ ಪುತ್ರಿಯು ಮೈಸೂರಿನಲ್ಲಿರುವ ಶಂಕೆಯ ಮೇಲೆ ಯಲಹಂಕ ಉಪನಗರ ಪೊಲೀಸರ ತಂಡ ಅಲ್ಲಿಗೆ ತೆರಳಿ ಅಲ್ಲಿನ ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಮಾಹಿತಿ ನೀಡಿ ಶೋಧ ನಡೆಸಿರುವ ಮಧ್ಯೆಯೇ ಅವರಿಬ್ಬರೂ ವಿವಾಹವಾಗಿರುವ ಪೋಟೋಗಳ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರಗೊಂಡಿದ್ದು ನಂತರ ನವ ದಂಪತಿಗಳು ಸಮಾಜಿಕ ಜಾಲ ತಾಣಗಳಲ್ಲಿ ಸಂದೇಶ ನೀಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Maasthi Gudi MLA ಪ್ರಸಾರ ಮಾದ್ಯಮ