ಬಿಜೆಪಿ,ಕಾಂಗ್ರೆಸ್ ವಿರುದ್ಧ ಹೆಚ್ಡಿಕೆ ಕಿಡಿ


08-03-2018 566

ಹಾಸನ: ಬಿಜೆಪಿಯವರು ಕರ್ನಾಟಕದಲ್ಲಿ ಸುಳ್ಳು ಹೇಳಿ ಅಧಿಕಾರ ಹಿಡಿಯಲು ಸಾಧ್ಯವಿಲ್ಲ, ಯೋಗಿ ಆದಿತ್ಯನಾಥ್ ಪಾದಯಾತ್ರೆ ಮಾಡಬೇಕಿರುವುದು ಗುಜರಾತ್ ನಲ್ಲಿ ಎಂದು ಬಿಜೆಪಿ ವಿರುದ್ಧ ಹೆಚ್.ಡಿ ಕುಮಾರ ಸ್ವಾಮಿ ಕಿಡಿಕಾರಿದ್ದಾರೆ.

ಮಹದಾಯಿ ವಿಚಾರದ ಬಗ್ಗೆ ಮಾತನಾಡದ ನೀವು ಮುಷ್ಟಿ ಅಕ್ಕಿ ಸಂಗ್ರಹ ಮಾಡುತ್ತಿದ್ದೀರಿ ಎಂದು ಲೇವಡಿ ಮಾಡಿದ್ದಾರೆ. ರಾಜ್ಯ ಸರ್ಕಾರವು ಜನರಲ್ಲಿ ವಿಶ್ವಾಸ ಮೂಡಿಸಲು ವಿಫಲವಾಗಿದೆ, ಲೋಕಾಯುಕ್ತರಿಗೆ ರಕ್ಷಣೆ ಕೊಡಲಾಗದವರು ನಾಡಿನ ಜನರಿಗೆ ಹೇಗೆ ರಕ್ಷಣೆ ಕೊಡುತ್ತೀರಿ? ಭದ್ರತಾ ವ್ಯವಸ್ಥೆ ಬಗ್ಗೆ ಸಿಎಂ ಜನರಿಗೆ ಸ್ಪಷ್ಟನೆ ನೀಡಲಿ, ನಿನ್ನೆಯ ಘಟನೆಗೆ ಯಾರು ಹೊಣೆ? ಯಾರ ತಲೆದಂಡ ಆಗಬೇಕು ಹೇಳಲಿ? ಮೆಟಲ್ ಡಿಕೆಕ್ಟರ್ ರಿಪೇರಿ ಮಾಡಿಸದಷ್ಟು ದರಿದ್ರ ಬಂದಿದೆಯೇ? ಎಂದು ಆಕ್ರೋಶಗೊಂಡು, ಗೃಹ ಸಚಿವರು ಮತ್ತು ಸಿಎಂ ಸಿದ್ದರಾಮಯ್ಯನವರ  ರಾಜೀನಾಮೆಗೆ ಆಗ್ರಹಿಸಿದ್ದಾರೆ.

ನಂಜನಗೂಡು, ಗುಂಡ್ಲುಪೇಟೆ ಚುನಾವಣೆಯಲ್ಲಿ ನಾವು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇವಾ? ನಿಮ್ಮ ಅಹಂಕಾರಕ್ಕೆ ಕಾಲವೇ ಉತ್ತರ ನೀಡಲಿದೆ, ಎವೆರಿ ಹಾಲಿಡೇ ಈಸ್ ನಾಟ್ ಸಂಡೇ ಸಿದ್ದರಾಮಯ್ಯ ನವರೇ ಎಂದ ಹೆಚ್ಡಿಕೆ, ದುರಹಂಕಾರದ ಮಾತು ನಿಲ್ಲಿಸಿ, ಜಾಹಿರಾತು ಮೂಲಕ ಜನರು ಮರುಳಾಗಲ್ಲ, ಮುಂದಿನ ದಿನಗಳಲ್ಲಿ ನಿಮಗೆ ಕಾದಿದೆ ಮಾರಿಹಬ್ಬ ಎಂದು ಎಚ್ಚರಿಸಿದ್ದಾರೆ.

ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಬೆಂಬಲ ಕೋರಿ ನಾನು ಅರ್ಜಿ ಹಿಡಿದು ಹೋಗಲ್ಲ, ನೈಸ್ ಅಕ್ರಮ ಬಗ್ಗೆ ರಾಜ್ಯಪಾಲರಿಗೆ ದೂರು ಕೊಡುತ್ತೇವೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಮಾತ್ರ ತಪ್ಪಿತಸ್ಥರಿಗೆ ಶಿಕ್ಷೆ, ಬಿಜೆಪಿ-ಕಾಂಗ್ರೆಸ್ ನಿಂದ ಸಾಧ್ಯವಿಲ್ಲ ಎಂದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

H.d.kumaraswamy siddaramaiah ಮಾರಿಹಬ್ಬ ತಪ್ಪಿತಸ್ಥ