ಕಾಂಗ್ರೆಸ್ ವಿರುದ್ಧ ವಿಶ್ವನಾಥ್ ವಾಗ್ದಾಳಿ


07-03-2018 339

ರಾಜ್ಯದಲ್ಲಿ ಕಾನೂನು‌ ಸುವ್ಯವಸ್ಥೆ ಹದಗೆಟ್ಟಿದೆ, ಬೆಂಗಳೂರಲ್ಲಿ ಕ್ರೈಂ ರೇಟ್ ಹೆಚ್ಚಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಂಸದ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.  ರಾಜಕಾರಣಿಗಳು ಬಳಸೋ ಭಾಷೆ ಕೇಳಿದರೆ ಅಸಹ್ಯವಾಗುತ್ತದೆ, ಮಾಜಿ ಮುಖ್ಯಮಂತ್ರಿಗಳು ಧಂ ಇದೆಯಾ ಅಂತಾರೆ, ನಾನು ಅಧಿಕಾರಕ್ಕೆ ಬಂದ 24ಗಂಟೆಯೊಳಗೆ ಜೈಲಿಗೆ ಹಾಕಿಸ್ತೀನಿ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳ್ತಾರೆ, ಜೈಲಿಗೆ ಹೋದವರು, ಜೈಲಿಗೆ ಹಾಕ್ತೀನಿ ಇವೇ ಹೇಳಿಕೆಗಳು ರಾಜ್ಯದಲ್ಲಿ ಕೇಳಿ ಬರುತ್ತಿವೆ ಎಂದು ಟೀಕಿಸಿದ್ದಾರೆ. ಯಾವ ಎಂಎಲ್ಎಯನ್ನು‌ ನೋಡಲಿ ಗುದ್ದಲಿ, ಪಿಕಾಸಿ‌ ಹಿಡಿದುಕೊಂಡಿದ್ದಾರೆ, ಬೆಂಗಳೂರಲ್ಲಿ ಬರೀ ಗುದ್ದಲಿಪೂಜೆಗಳಾಗುತ್ತಿವೆ, ಎಂದು ಸರ್ಕಾರವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಶಾಸಕರ ಮಕ್ಕಳ ಗೂಂಡಾಗಿರಿಗಳು ಹೆಚ್ಚಾಗ್ತಿವೆ. ಕುಮಾರಸ್ವಾಮಿ ಅಧಿಕಾರಕ್ಕೆ ಬಂದಲ್ಲಿ ಬೆಂಗಳೂರಲ್ಲಿ ಶಾಂತಿ ನೆಲೆಸುತ್ತೆ ಎಂದಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

H.Vishwanath crime ಗೂಂಡಾಗಿರಿ ಸರ್ಕಾರ