ಗಾಂಜಾ ಬೆಳೆಸಿದ್ದ ಆಪರಾಧಕ್ಕೆ 3 ವರ್ಷ ಜೈಲು


07-03-2018 370

ಶಿವಮೊಗ್ಗ: ಗಾಂಜಾ ಬೆಳೆ ಬೆಳೆಸಿದ್ದ ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ. ಶಿವಮೊಗ್ಗ ಜಿಲ್ಲೆಯ ಸೊರಬದ ಅಂಕರವಳ್ಳಿ ನಿವಾಸಿ ರಿಯಾಜ್ ಶಿಕ್ಷೆಗೆ ಗುರಿಯಾದವನು. ಗಾಂಜಾ ಬೆಳೆದಿರುವ ಆರೋಪದಲ್ಲಿ ಡಿಸೆಂಬರ್ 3, 2015ರಂದು ಬಂಧಿಸಲ್ಪಟ್ಟಿದ್ದ. ಈ ಕುರಿತು ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಆರ್.ಬಿ.ಧರ್ಮಗೌಡರ್,  ಆರೋಪಿಗೆ 3 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Ganja court ನ್ಯಾಯಾಧೀಶ ವಿಚಾರಣೆ