ಮಂಗಳೂರಲ್ಲಿ ಪೊಲೀಸ್ ಬಿಗಿ ಭದ್ರತೆ


06-03-2018 260

ಮಂಗಳೂರು: ಮಂಗಳೂರಿನಲ್ಲಿ ಬಿಜೆಪಿಯ ಜನ ಸುರಕ್ಷಾ ಯಾತ್ರೆ ಸಮಾರೋಪ ಸಮಾವೇಶ ಹಿನ್ನೆಲೆ. ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಭದ್ರತೆಗೆ 1500 ಪೊಲೀಸರನ್ನು ನಿಯೋಜಿಸಲಾಗಿದೆ. ಇಬ್ಬರು ಡಿಸಿಪಿ, 10 ಎಸಿಪಿ, 48 ಎಸ್ಐ. 90 ಪಿ.ಎಸ್.ಐಗಳನ್ನು ಮತ್ತು 16 ಕೆಎಸ್ಆರ್ಪಿ ತುಕಡಿ, 8 ನಗರ ಸಶಸ್ತ್ರ ಮೀಸಲು ಪಡೆಗಳನ್ನು ನಿಯೋಸಿದ್ದಾರೆ. ಕಳೆದ ದಿನಗಳಲ್ಲಿ ಕರಾವಳಿಯ ಪ್ರಮುಖ ಭಾಗಗಳಲ್ಲಿ ಜನ ಸುರಕ್ಷಾ ಯಾತ್ರೆ ಸಾಗಿದ್ದು, ಇಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಸಮಾರೋಪ ಸಮಾವೇಶ  ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

police protection ಪಿಎಸ್ಐ ಕೆಎಸ್ಆರ್ ಪಿ