'ಸಿದ್ದು ಇಂದ ನಮಗೆ ಪಾಠ ಅಗತ್ಯ ಇಲ್ಲ'


05-03-2018 412

ಬೆಂಗಳೂರು: ನಗರದ ಕೆ.ಆರ್.ಪುರಂನಲ್ಲಿ ಹಮ್ಮಿಕೊಂಡಿದ್ದ ಬಿಜೆಪಿಯ ಬೆಂಗಳೂರು ರಕ್ಷಿಸಿ ಪಾದಯಾತ್ರೆಯಲ್ಲಿ ಆರ್.ಅಶೋಕ್ ಮಾತನಾಡಿ, ರಾಹುಲ್ ಗಾಂಧಿ ಹೋದಲೆಲ್ಲಾ ಬಿಜೆಪಿ ಗೆಲ್ಲುತ್ತಿದೆ, ಈಶಾನ್ಯ ರಾಜ್ಯಗಳಲ್ಲೂ ಈಗಾಗೆಲೇ ಬಿಜೆಪಿ ಗೆದಿದ್ದೆ. ರಾಹುಲ್ ಕರ್ನಾಟಕಕ್ಕೆ ಬಂದು ಪ್ರಚಾರ ಮಾಡಿದರೆ ಕಾಂಗ್ರೆಸ್ ಗೆಲ್ಲುತ್ತಾ? ಎಂದ ಅವರು, ಈಗ ಇಟಲಿ ಹೋಗಿದ್ದಾರಂತೆ ರಾಹುಲ್ ಗಾಂಧಿ, ಇಟಲಿಯಲ್ಲಿ ಲೋಕಲ್ ಬಾಡಿ ಎಲೆಕ್ಷನ್ ನಡೆತಿದೆ ಹಾಗಾಗಿ ಅಲ್ಲಿಗೆ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಬಿಬಿಎಂಪಿಯ ಕಟ್ಟಡಗಳನ್ನು ಅಡಮಾನ ಇಟ್ಟಿತ್ತು ಎಂದು ಆರೋಪಿಸುವ ಸಿದ್ದರಾಮಯ್ಯ, 2ಲಕ್ಷ ಕೋಟಿ ಸಾಲ ಮಾಡಿದ್ದಾರೆ, ಹುಟ್ಟೊ ಮಕ್ಕಳ ಮೇಲೂ 38ಸಾವಿರ ಸಾಲದ ಹೊರೆ ಹೊರಿಸಿದ್ದಾರೆ ಎಂದು ಚಾಟಿ ಬೀಸಿದ್ದಾರೆ. ಸಿದ್ದರಾಮಯ್ಯನವರ ಬಹಳ ಹತ್ತಿರದ ಬಂಧು ಚಿಕ್ಕರಾಯಪ್ಪ ಅವರನ್ನು ಪಿಡಬ್ಲೂಡಿ ಸೆಕ್ರೆಟರಿ ಮಾಡಿದ್ದು ಯಾರು? ಇಂತಹ ಇತಿಹಾಸ ಇರುವ ಸಿದ್ದರಾಮಯ್ಯ ಅವರಿಂದ ನಮಗೆ ಪಾಠ ಅಗತ್ಯ ಇಲ್ಲ ಎಂದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

R.Ashok janaraksha yatra ಎಲೆಕ್ಷನ್ ಇಟಲಿ