ಬಿಜೆಪಿಯಿಂದ ಹಿಂದುಳಿದ ವರ್ಗದವರ ಸಮಾವೇಶ


03-03-2018 413

ಶಿವಮೊಗ್ಗ: ಈಗಾಗಲೇ ರೈತ ಸಮಾವೇಶ ನಡೆಸಿ ಬಳಿಕ ಜನ ಸುರಕ್ಷಾ, ಬೆಂಗಳೂರು ರಕ್ಷಾ ಯಾತ್ರೆಗಳಲ್ಲಿ ಮುಳುಗಿರುವ ಬಿಜೆಪಿ, ಇದೀಗ ಹಿಂದುಳಿದ ವರ್ಗದವರ ಸಮಾವೇಶಕ್ಕೆ ತಯಾರಿ ನಡೆಸಿದೆ. ಇದೇ ತಿಂಗಳ 10ರಂದು ಕೂಡಲ ಸಂಗಮದಲ್ಲಿ ಹಿಂದುಳಿದ ವರ್ಗದವರ ಸಮಾವೇಶ ನಡೆಯಲಿದೆ ಎಂದು ವಿಧಾನ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. 

ಈ ಸಮಾವೇಶದಲ್ಲಿ ಉತ್ತರ ಕರ್ನಾಟಕದ 10 ಜಿಲ್ಲೆಯ ಹಿಂದುಳಿದ ವರ್ಗದ ಜನ ಭಾಗವಹಿಸಲಿದ್ದಾರೆ. ಕನಕದಾಸರ ಕರ್ಮಭೂಮಿ ಕಾಗಿನೆಲೆಯಲ್ಲಿ ಮಾರ್ಚ್ 25ರಂದು ಎರಡನೇ ಸಮಾವೇಶ ನಡೆಯಲಿದೆ. ಕಾಗಿನೆಲೆ ಸಮಾವೇಶದಲ್ಲಿ ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಯವರು ಭಾಗಹಿಸಲಿದ್ದಾರೆ. ಹಿಂದುಳಿದ ವರ್ಗದವರು ಬಿಜೆಪಿ ಜೊತೆ ಇದ್ದಾರೆ ಎಂಬುದನ್ನು ತೋರಿಸಲು ಈ ಸಮಾವೇಶ ನಡೆಸಲಾಗುತ್ತಿದೆ ಎಂದ ಈಶ್ವರಪ್ಪ ಹೇಳಿದ್ದಾರೆ. ಕೂಡಲ ಸಂಗಮದ ಸಮಾವೇಶವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಉದ್ಘಾಟನೆ ಮಾಡಲಿದ್ದಾರೆ.

ಕಾಂಗ್ರೆಸ್ ಹೈ ಕಮಾಂಡ್ ಮುಂದಿನ ಸಿಎಂ ಅಭ್ಯರ್ಥಿ ಯಾರು ಎಂದು ಘೋಷಿಸಿಲ್ಲ, ಹೀಗಿದ್ದರೂ ಸಿದ್ದರಾಮಯ್ಯನವರು ನಾನೇ ಮುಂದಿನ ಸಿಎಂ ಎಂದು ಹೇಳುತ್ತಿರುವುದು ಎಷ್ಟು ಸರಿ ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ. ಇದೇ ವೇಳೆ, ನಾನು ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆಯೇ ಹೊರತು ಚುನಾವಣಾ ಟಿಕೆಟ್ಗಾಗಿ ಅಲ್ಲ ಎಂದು ಈಶ್ವರಪಪ್ಪ ಹೇಳಿದ್ದಾರೆ.


ಒಂದು ಕಮೆಂಟನ್ನು ಬಿಡಿ