ಮಡಿಕೇರಿಯಲ್ಲಿ ಜನ ಸುರಕ್ಷಾ ಯಾತ್ರೆಗೆ ಚಾಲನೆ


03-03-2018 455

ಮಡಿಕೇರಿ: ಮುಂಬರುವ ವಿಧಾನಸಭಾ ಚುನಾವಣೆಗೆ ಯಾತ್ರೆಗಳನ್ನೇ ನೆಚ್ಚಿಕೊಂಡಿರುವ ಬಿಜೆಪಿ ಇಂದು, ಮಡಿಕೇರಿಯಿಂದ ಜನ ಸುರಕ್ಷಾ ಯಾತ್ರೆ ಆರಂಭಿಸಲಿದೆ. ಈ ಯಾತ್ರೆಗೆ ಕೇಂದ್ರ ಸಚಿವ ಸದಾನಂದ ಗೌಡರು ಚಾಲನೆ ನೀಡಲಿದ್ದಾರೆ. ಕುಶಾಲನಗರದಿಂದ ಗುಡ್ಡೆಹೊಸೂರಿನವರೆಗೆ 5 ಕಿಲೋ ಮೀಟರ್ ಪಾದಯಾತ್ರೆ, ನಂತರ ಮಡಿಕೇರಿಗೆ ವಾಹನ ಜಾಥಾ ಸಾಗಲಿದೆ.

ಮಧ್ಯಾಹ್ನ 3 ಗಂಟೆಗೆ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಸಂಜೆ ಮಡಿಕೇರಿಯಿಂದ ಸಂಪಾಜೆ ಮಾರ್ಗವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಯಾತ್ರೆಯ ಮುಂದುವರಿಕೆ. ದಕ್ಷಿಣ ಕನ್ನಡದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಯಾತ್ರೆಯನ್ನು ಮುನ್ನಡೆಸಲಿದ್ದಾರೆ. ಸಂಸದ ಪ್ರತಾಪ್ ಸಿಂಹ, ಮಡಿಕೇರಿಯ ಬಿಜೆಪಿ ಶಾಸಕರು, ಸಾವಿರಾರು ಬಿಜೆಪಿ ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಜನ ಸುರಕ್ಷಾ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.


ಒಂದು ಕಮೆಂಟನ್ನು ಬಿಡಿ