ಬಸ್ ಹರಿದು ವೃದ್ಧೆ ಸಾವು


02-03-2018 548

ಬೆಂಗಳೂರು: ಆರ್.ಟಿ.ನಗರದ ಸಿಬಿಐ ಕಚೇರಿ ಮುಂಭಾಗ ವಾಯುವಿಹಾರಕ್ಕೆ ಹೋಗುತ್ತಿದ್ದ ವೃದ್ದರೊಬ್ಬರು ರಸ್ತೆ ದಾಟುವಾಗ ವೇಗವಾಗಿ ಹೋಗುತ್ತಿದ್ದ ತೆಲಂಗಾಣ ಸರ್ಕಾರಿ ಬಸ್ ಹರಿದು ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಗಂಗಾ ನಗರದ ಕೃಷ್ಣ ಮೆನನ್ (78)ಎಂದು ಗುರುತಿಸಲಾಗಿದೆ. ಮುಂಜಾನೆ 4.50ರ ವೇಳೆ ಕೃಷ್ಣ ಮೆನನ್ ಅವರು ವಾಯುವಿಹಾರಕ್ಕೆ ಹೋಗಲು ಸಿಬಿಐ ಕಚೇರಿ ಮುಂಭಾಗ ರಸ್ತೆ ದಾಟುತ್ತಿದ್ದರು.

ಈ ವೇಳೆ ಮೆಜೆಸ್ಟಿಕ್ ಕಡೆಗೆ ಹೋಗುತ್ತಿದ್ದ ತೆಲಂಗಾಣ ಸರ್ಕಾರಿ ಬಸ್ ಹರಿದು ಗಂಭೀರವಾಗಿ ಗಾಯಗೊಂಡಿದ್ದ ಮೆನನ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದರಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿರುವ ಆರ್.ಟಿ. ನಗರ ಸಂಚಾರ ಪೊಲೀಸರು, ಬಸ್ ಚಾಲಕನನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Bus acccident women died ಮೆಜೆಸ್ಟಿಕ್ ಸಂಚಾರ