ವಿಶಿಷ್ಟ ಆರೋಗ್ಯ ಭಾಗ್ಯ ಯೋಜನೆ


28-02-2018 957

ಕೋಲಾರ: ಮುಖ್ಯಮಂತ್ರಿ, ಸಚಿವರು ಸೇರಿದಂತೆ ಸರ್ಕಾರಿ ಅಧಿಕಾರಿಗಳೂ ಸಹ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಬಹುದಾದಂತಹ, ಆರೋಗ್ಯ ಭಾಗ್ಯ ಯೋಜನೆಯನ್ನು ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಜಾರಿ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್  ಹೇಳಿದ್ದಾರೆ. ಕೆಪಿಎಂಇ ತಿದ್ದುಪಡಿ ಅನ್ವಯ ಪ್ರತಿಯೊಬ್ಬರಿಗೂ ಅರೋಗ್ಯ ಭಾಗ್ಯ ಸಿಗಲಿದ್ದು. ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾದರೆ ಮಾತ್ರ ಚಿಕಿತ್ಸಾ ವೆಚ್ಚ ಮರು ಸಂದಾಯ ಮಾಡಲಾಗುತ್ತದೆ ಎಂದು ರಮೇಶ್ ಕುಮಾರ್ ತಿಳಿಸಿದರು. ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ  ನಡೆದಿರುವ ನವಜಾತ ಶಿಶು ಅಪಹರಣ ಪ್ರಕರಣ ಕುರಿತು, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕೂಡಲೇ ಕ್ರಮಕ್ಕೆ ಸೂಚಿಸಲಾಗಿದೆ ಎಂದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

K. R. Ramesh Kumar KMPA ಆಸ್ಪತ್ರೆ ಅಪಹರಣ