ಕಳ್ಳರು ಸಿಕ್ಕರೂ ಮಾಲು ಸಿಗಲಿಲ್ಲ…


28-02-2018 648

ವಿಜಯಪುರ: ಬಟ್ಟೆ ಅಂಗಡಿಯಲ್ಲಿ ಕಳ್ಳತನ ಮಾಡುತ್ತಿದ್ದ ವೇಳೆ ಇಬ್ಬರು ಕಳ್ಳರು ಸಿಕ್ಕಿಬಿದ್ದಿದ್ದಾರೆ, ಆದರೆ ಅವರ ಜೊತೆಗಿದ್ದ ಮತ್ತಿಬ್ಬರು ಕಳ್ಳರು, ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಬಟ್ಟೆ ಹಾಗೂ 48 ಸಾವಿರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ. ವಿಜಯಪುರದ ಪುಲಿಕೇಶಿನಗರದಲ್ಲಿರುವ ಝೂಯ ಕಲೆಕ್ಷನ್ಸ್ ಅಂಗಡಿಯಲ್ಲಿ ನಾಲ್ವರು ಕಳ್ಳರ ಗುಂಪು ಕಳ್ಳತನ ಮಾಡುವಾಗ ಇಬ್ಬರು ಅಂಗಡಿ ಮಾಲೀಕರ ಕೈಗೆ ಸಿಕ್ಕಿಬಿದ್ದಿದ್ದಾರೆ. ಸಿಕ್ಕಿಬಿದ್ದ ಕಳ್ಳರಿಗೆ ಪೊಲೀಸರ ಎದುರೇ ಅಂಗಡಿ ಮಾಲೀಕ ಮತ್ತು ಸ್ಥಳೀಯರು ಧರ್ಮದೇಟು ನೀಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

thief Money ಅಂಗಡಿ ಧರ್ಮದೇಟು