ಭೀಕರ ಅಪಘಾತ ಮೂವರ ದುರ್ಮರಣ


27-02-2018 539

ವಿಜಯಪುರ: ಮಹಾರಾಷ್ಟ್ರದ ತುಳಜಾಪುರ ಬಳಿ ಭೀಕರ ಅಪಘಾತ ಸಂಭವಿಸಿದೆ. ಬೊಲೆರೊ ಮತ್ತು ಸ್ವಿಫ್ಟ್ಕಾರು ನಡುವೆ ನಡೆದ ಅಫಘಾತದಲ್ಲಿ ವಿಜಯಪುರ ಜಿಲ್ಲೆಯ ಇಬ್ಬರು ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಾಗೂ 9ಜನರಿಗೆ ಗಂಭೀರ ಗಾಯಗಳಾಗಿವೆ. ಮಹಾರಾಷ್ಟ್ರದ ಔರಂಗಬಾದ್ ನಲ್ಲಿ ಇಸ್ತಾಮಾ(ಧರ್ಮಸಭೆ)ಗೆ ತೆರಳಿ ವಾಪಸ್ ಬರುವಾಗ ದುರ್ಘಟನೆ ನಡೆದಿದೆ. ಟಿಪ್ಪು ಉಮರಸಾಬ್ ಚಪ್ಪರಬಂದ(23) ಮತ್ತು ಅಬ್ದುಲಸಾಬ್ ಹುಸೇನಸಾಬ್ ಚಪ್ಪರಬಂದ್(40) ಮತ್ತು ಅಮೀರ್ ನಂದವಾಡಗಿ( 50) ಮೃತ ದುರ್ದೈವಿಗಳು. ಗಾಯಾಳುಗಳನ್ನು ಮಹಾರಾಷ್ಟ್ರದ ಸೋಲಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತುಳಜಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Accident tuljapur ಮಹಾರಾಷ್ಟ್ರ ಗಂಭೀರ