ಜೆಡಿಎಸ್ ಅಭ್ಯರ್ಥಿ ವಿರುದ್ಧ ಕಿಮ್ಮನೆ ಕಿಡಿ


24-02-2018 534

ಶಿವಮೊಗ್ಗ: ತೀರ್ಥಹಳ್ಳಿ ಶಾಸಕ ಕಿಮ್ಮನೆ ರತ್ನಾಕರ್ ಜೆಡಿಎಸ್ ಅಭ್ಯರ್ಥಿ ಹಾಗು ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಮಂಜುನಾಥ್ ಗೌಡ ವಿರುದ್ದ ಶಿವಮೊಗ್ಗದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಮಂಜುನಾಥ್ ಗೌಡರು ಡಿಸಿಸಿ ಬ್ಯಾಂಕ್ ನ್ನು ಡಕಾಯಿತಿ ಮಾಡಿದ್ದಾರೆ. ಡಿಸಿಸಿ ಬ್ಯಾಂಕ್ ಅವ್ಯವಹಾರದ ಚಾರ್ಜ್ ಶೀಟ್ ನಲ್ಲಿ ಮಂಜುನಾಥ್ ಗೌಡರ ಹೆಸರು ಕೈ ಬಿಟ್ಟಿರುವುದರ ವಿರುದ್ಧ ಹೈಕೋರ್ಟ್ ಅಥವಾ ಶಿವಮೊಗ್ಗ ಜಿಲ್ಲಾ ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

ಡಿಸಿಸಿ ಬ್ಯಾಂಕ್ ನಲ್ಲಿ 62.77 ಕೋಟಿ ಅವ್ಯವಹಾರ ನಡೆದಿತ್ತು. ಬ್ಯಾಂಕ್ ಗೆ ಇನ್ನೂ 55 ಕೋಟಿ ಸಾಲ ಬಾಕಿ ಬರಬೇಕಿದೆ. ಮಂಜುನಾಥ್ ಗೌಡರಿಗೆ ಇನ್ನೂ ಕೋರ್ಟ್ನಿಂದ ಕ್ಲೀನ್ ಚಿಟ್ ನೀಡಿಲ್ಲ. ಇದು ತೀರ್ಥಹಳ್ಳಿಯ ಚುನಾವಣಾ ಅಸ್ತ್ರವೂ ವಲ್ಲ, ಆದರೆ ಕ್ಷೇತ್ರದ ಜನತೆಗೆ ಭ್ರಷ್ಟಚಾರದ ಬಗ್ಗೆ ಮಾಹಿತಿ ನೀಡುವುದು ನನ್ನ ಕರ್ತವ್ಯ ಎಂದಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Kimmane Rathnakar DCC ಕರ್ತವ್ಯ ಭ್ರಷ್ಟಚಾರ