ಜೆಡಿಎಸ್-ಬಿಎಸ್ಪಿ ಮೈತ್ರಿ: ಬಾಲಕೃಷ್ಣ ವ್ಯಂಗ್ಯ


24-02-2018 582

ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಎಸ್ಪಿ ಜೊತೆಗೆ ಮೈತ್ರಿ ಹಿನ್ನೆಲೆ, ಜೆಡಿಎಸ್ ಬಂಡಾಯ ಶಾಸಕ ಬಾಲಕೃಷ್ಣ ಕುಮಾರ ಸ್ವಾಮಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಮಾಗಡಿ ತಾಲ್ಲೂಕಿನ ತಗ್ಗಿಕುಪ್ಪೆ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬಿಎಸ್ಪಿ ಬೆಂಬಲಿಸುವ ಜನರು ರಾಜ್ಯದಲ್ಲಿ ಕಾಂಗ್ರೆಸ್ ಪರವಾಗಿದ್ದಾರೆ, ಮೀಸಲು ಕ್ಷೇತ್ರದಲ್ಲಿ ಮಾತ್ರ ಬೆಂಬಲಿಸಲಿದ್ದಾರೆ ಎಂದರು.

ಜೆಡಿಎಸ್ನಿಂದ ಕಳೆದ ಚುನಾವಣೆಯಲ್ಲಿ ಗೆದ್ದವರೆಲ್ಲ ಗೆಲವು ಸಾಧಿಸುವುದಿಲ್ಲ, ಎಲ್ಲೆಲ್ಲಿ ಗೆಲ್ಲಲು ಸಾಮರ್ಥ್ಯ ಇಲ್ಲವೋ ಅಲ್ಲಿ ಬಿಎಸ್ಪಿ ಪಕ್ಷಕ್ಕೆ ಟಿಕೆಟ್ ಕೊಡುತ್ತಾರೆ ಎಂದು ವ್ಯಂಗ್ಯವಾಡಿದರು. ಮಳವಳ್ಳಿ, ನೆಲಮಂಗಲ, ದೇವನಹಳ್ಳಿ, ರಾಮನಗರ ಕ್ಷೇತ್ರಗಳಲ್ಲಿ ಬಿಎಸ್ಪಿಗೆ ಟಿಕೆಟ್ ಕೊಡಲಿ ನೋಡೋಣ?ಎಂದು ಸವಾಲೆಸೆದಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

BSP H.c balakrishna ರಾಮನಗರ ಟಿಕೆಟ್