ನಾಲಿಗೆ ಹಿಡಿತದಲ್ಲಿರಲಿ…


23-02-2018 774

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಮಾತುಗಳು ಹಿಡಿತದಲ್ಲಿದ್ದರೆ ಒಳ್ಳೆಯದು ಎಂದು ಸಚಿವ ಡಿ.ಕೆ.ಶಿವಕುಮಾರ್ ಸಲಹೆ ನೀಡಿದ್ದಾರೆ. ರಾಹುಲ್ ಗಾಂಧಿ ಯವರನ್ನು ಬಚ್ಚಾ ಎಂದು ಕರೆಯುವಂಥ ಮಾತುಗಳು ನಿಮಗೆ ಶೋಭೆ ತರುವುದಿಲ್ಲ ಮತ್ತು ಬಿಜೆಪಿಯನ್ನು ಅಧಿಕಾರಕ್ಕೂ ತರುವುದಿಲ್ಲ ಎಂದು ಕುಟುಕಿದ್ದಾರೆ. ನೀವು ರಾಜ್ಯದ ಜನತೆ ಮತ್ತು ಕಾಂಗ್ರೆಸ್ ಪಕ್ಷದ ಕ್ಷಮೆ ಕೇಳಬೇಕು ಎಂದು ಯಡಿಯೂರಪ್ಪನವರನ್ನು ಆಗ್ರಹಿಸಿದ್ದಾರೆ. ಪಕೋಡ ಮಾರಿಯೂ ಜೀವನ ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದು ನಾಚಿಕೇಡು ಎಂದು ಟೀಕಿಸಿದ ಡಿಕೆಶಿ, ಬರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಯುವಕರು ದಂಗೆ ಏಳುತ್ತಾರೆ ಎಂದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

D.K.Shivakumar Rahul Gandhi ಪಕೋಡ ದಂಗೆ