ಬೆಂಗೆರೆ ಕಲ್ಲು ತೂರಾಟ ಪ್ರಕರಣ


21-02-2018 597

ಮಂಗಳೂರು: ಬೆಂಗರೆಯಲ್ಲಿ ನಿನ್ನೆ ರಾತ್ರಿ ನಡೆದ ಗುಂಪು ಘರ್ಷಣೆ ಕುರಿತು ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಮಾಹಿತಿ ನೀಡಿದ್ದಾರೆ. ಮಂಗಳವಾರ ಮೀನುಗಾರರ ಸಮಾವೇಶದಲ್ಲಿ ಪಾಲ್ಗೊಂಡ ಬಿಜೆಪಿ ಕಾರ್ಯಕರ್ತರು ಉಡುಪಿಯಿಂದ ಬಸ್ ನಲ್ಲಿ ಬರುತ್ತಿದ್ದ ವೇಳೆ ಎರಡು ಗುಂಪಿನ ಮಧ್ಯೆ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ, ಎರಡೂ ಗುಂಪಿನವರು ಮತ್ತು ಪೊಲೀಸರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ನಮ್ಮ ಮೇಲೆ ಮತ್ತೊಂದು ಸಮುದಾಯದವರು ಹಲ್ಲೆ ಮಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಅರೋಪಿಸಿದ್ದಾರೆ, ಇನ್ನೊಂದು ಗುಂಪಿನವರು ಬಿಜೆಪಿಯವರು ನಮ್ಮ ಧಾರ್ಮಿಕ ಕೇಂದ್ರಕ್ಕೆ ಕಲ್ಲು ತೂರಿದ್ದಾರೆ ಎಂದು  ದೂರಿದ್ದಾರೆ. ಆದರೆ, ಈವರೆಗೂ ಯಾರೂ ಅಧಿಕೃತವಾಗಿ ದೂರು ನೀಡಿಲ್ಲ, ಪರಿಸ್ಥಿತಿ ಹತೋಟಿಯಲ್ಲಿದ್ದು, ಹೆಚ್ಚುವರಿ ಭದ್ರತೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

BJP Muslim ಪೊಲೀಸ್ ಹೆಚ್ಚುವರಿ