ಸಿಮೆಂಟ್ ಮಿಕ್ಸರ್ ಪಲ್ಟಿ: ಚಾಲಕ ಸಾವು


20-02-2018 295

ಬೆಂಗಳೂರು: ಸಿಮೆಂಟ್ ಮಿಕ್ಸರ್ ಲಾರಿ ಅರಳಿಮರಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದು ಚಾಲಕ ಮೃತಪಟ್ಟರೆ, ಸಹಾಯಕ ಗಾಯಗೊಂಡಿರುವ ದುರ್ಘಟನೆ ಕೆಂಗೇರಿಯ ಸಾವನ್ ದರ್ಬಾರ್ ಆಸ್ಪತ್ರೆ ಬಳಿ ನಡೆದಿದೆ. ಅಸ್ಸಾಂ ಮೂಲದ ನಾಸೀರುದ್ದೀನ್ (45) ಮೃತಪಟ್ಟವರು. ಗಾಯಗೊಂಡಿರುವ ರಾಮು ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನ ಸ್ಥಿತಿ ಗಂಭೀರವಾಗಿದೆ.

ಮೆಟ್ರೋ ನಿರ್ಮಾಣ ಹಂತದ ಕಾಮಗಾರಿಯ ಸಿಮೆಂಟ್ ಮಿಕ್ಸರ್ ಲಾರಿ ಚಾಲಕನಾಗಿದ್ದ ನಾಸೀರುದ್ದೀನ್ ರಾತ್ರಿ 12.25ರ ವೇಳೆ ಉತ್ತರಹಳ್ಳಿ ಮುಖ್ಯರಸ್ತೆಯಿಂದ ಕೆಂಗೇರಿ ಕಡೆಗೆ ಬರುತ್ತಿದ್ದಾಗ ಮಾರ್ಗಮಧ್ಯೆ ಸಾವನ್ ದರ್ಬಾರ್ ಆಶ್ರಮದ ಬಳಿ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಅರಳಿಮರಕ್ಕೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಉರುಳಿ ಬಿದ್ದ ಮಿಕ್ಸರ್ ಅಡಿ ಸಿಕ್ಕ ನಾಸೀರುದ್ದೀನ್ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡಿರುವ ರಾಮುನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿರುವ ಕೆಂಗೇರಿ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

mixer death ಸಿಮೆಂಟ್ ಪ್ರಕರಣ