‘ಪ್ರಧಾನಿ ಹುದ್ದೆಗೆ ತಕ್ಕಂತೆ ವರ್ತಿಸಿ'..


20-02-2018 383

ಬೆಂಗಳೂರು: ನರೇಂದ್ರ ಮೋದಿ ಬಿಜೆಪಿ ಪ್ರಧಾನಿ ಅಲ್ಲ, ಅವರು ದೇಶದ ಪ್ರಧಾನಿ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಕರ್ನಾಟಕ ಸರ್ಕಾರವನ್ನು 10 ಪರ್ಸೆಂಟ್ ಕಮಿಷನ್ ಸರ್ಕಾರ ಎಂಬ ಪ್ರಧಾನಿ ಮೋದಿ ಆರೋಪದ ಕುರಿತು ಪ್ರತಿಕ್ರಿಯಿಸಿದ ಕೆ.ಜೆ.ಜಾರ್ಜ್, ರಾಜ್ಯಕ್ಕೆ ಬಂದು ಸುಳ್ಳು ಆರೋಪ ಮಾಡುವ ಮೂಲಕ ಮೋದಿಯವರು, ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುವಂತೆ ವರ್ತಿಸುವುದು ಸರಿಯಲ್ಲ, ಪ್ರಧಾನಿ ಹುದ್ದೆಯಲ್ಲಿರುವವರು ಈ ರೀತಿ ಹೇಳಿಕೆ ನೀಡುವುದು ಅವರ ಸ್ಥಾನಕ್ಕೆ ಗೌರವ ತರುವುದಿಲ್ಲ ಎಂದರು.

ಪ್ರಧಾನಿ ಮೋದಿ, ನೋಟ್ ಬ್ಯಾನ್ ನಂತಹ ಜನರಿಗೆ ತೊಂದರೆ ಕೊಡುವ ಕಾರ್ಯಕ್ರಮ ಮಾಡಿದರೆ ಹೊರತು ಮತ್ತೇನೂ ಮಾಡಿಲ್ಲ ಎಂದು ಕೆ.ಜೆ.ಜಾರ್ಜ್ ಕಿಡಿಕಾರಿದರು. ಗುಜರಾತಿನ ಪೆಟ್ರೋ ಕೆಮಿಕಲ್ಸ್ ಯೋಜನೆಯಿಂದ 20 ಸಾವಿರ ಕೋಟಿ ರೂ. ನಷ್ಟವಾಯಿತು ಇದಕ್ಕೆ ಹೊಣೆ ಯಾರು? ಈ ನಷ್ಟವನ್ನು ಮೋದಿಯವರು ಕೇಂದ್ರ ಸರಕಾರದ ಸಬ್ಸಿಡಿಯಿಂದ ಭರ್ತಿ ಮಾಡುತ್ತಿದ್ದಾರೆ ಎಂದು ಕೆ.ಜೆ.ಜಾರ್ಜ್ ಆರೋಪಿಸಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

K.J.George Narendra modi ನೋಟ್ ಬ್ಯಾನ್ ಸಬ್ಸಿಡಿ