ಮರಳು ದಂಧೆಗೆ ಗ್ರಾಮಸ್ಥರ ಅಂಕುಶ


19-02-2018 332

ಕೊಪ್ಪಳ: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 30 ಟ್ರ್ಯಾಕ್ಟರ್ ಗಳನ್ನು ಗ್ರಾಮಸ್ಥರು ತಡೆದು ನಿಲ್ಲಿಸಿದ್ದಾರೆ. ಕೊಪ್ಪಳದ ಕಾರಟಗಿ ತಾಲ್ಲೂಕಿನ ಬರಗೂರು, ಕಕ್ಕರಗೋಳ, ಮುಸ್ಟೂರು ಗ್ರಾಮಗಳ ನದಿಗಳಿಂದ ಅಕ್ರಮವಾಗಿ ಸಾಗಾಣಿಕೆಯಾಗುತ್ತಿದ್ದು, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಪ್ರತಿನಿತ್ಯ ಅಕ್ರಮ ಮರಳು ದಂಧೆ ನೋಡಿ ಬೇಸತ್ತಿದ್ದ ಗ್ರಾಮಸ್ಥರು, ಕಾರ್ಯಾಚರಣೆಗಿಳಿದು ಗಂಗಾವತಿ ತಾಲ್ಲೂಕಿನ ಶ್ರೀರಾಮನಗರದಲ್ಲಿ 30 ಟ್ರ್ಯಾಕ್ಟರ್ ಗಳನ್ನು ತಡೆದಿದ್ದಾರೆ. ಅಧಿಕಾರಿಗಳ ಕುಮ್ಮಕ್ಕಿನಿಂದಲೇ ದಂಧೆ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

sand mafia illegal sand ಅಧಿಕಾರಿ ಗ್ರಾಮೀಣ